ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂದೆ ಸ್ಪರ್ಧಾಕಾಂಕ್ಷಿಗಳ ಪರದಾಟ!

Lingaraj Badiger
Updated On : 22 Feb 2013, 11:14 am

ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳು ತಮ್ಮ ಅಧಿಕೃತ ಮತದಾರರ ಸಂಖ್ಯೆ, ಮತದಾರರ ಪಟ್ಟಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಣೆಗೆ ತರಾತುರಿ ಪ್ರಯತ್ನ ನಡೆದವಾದರೂ, ತೀರಾ ನಿಯಮಿತ ಕಾಲಾವಧಿಯಲ್ಲಿ ಸಿದ್ಧಗೊಳ್ಳದೆ, ಅಧಿಕಾರಿಗಳೂ ಒತ್ತಡಕ್ಕೆ ಸಿಲುಕಿದ್ದಾರೆ. ಅತ್ತ ಸ್ಪರ್ಧಾಕಾಂಕ್ಷಿಗಳು ತಾಲೂಕು ಕಚೇರಿ ಮುಂದೆ ರಾತ್ರಿ 8 ಗಂಟೆಯಾದರೂ ಮತದಾರರ ಭಾಗ, ಕ್ರಮ ಸಂಖ್ಯೆ ವಿವರಗಳು ಲಭ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಶುಕ್ರವಾರ ಮತ್ತು ಶನಿವಾರ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಕಾತರರಾಗಿದ್ದಾರೆ. ಅಧಿಕೃತ ಪಕ್ಷಗಳಿಂದ ಕಣಕ್ಕಿಳಿಯುತ್ತಿರುವ ಸ್ಪರ್ಧಿಗಳು, ಪಕ್ಷೇತರವಾಗಿ ಕಣಕ್ಕಿಳಿಯುತ್ತಿರುವ ಸ್ಪರ್ಧಿಗಳಿಗೆ ಪರಿಷ್ಕೃತ ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಮತ್ತು ಭಾಗ ಸಂಖ್ಯೆ ಅತಿ ಮುಖ್ಯವಾಗಿದ್ದು, ನಾಮಪತ್ರ ಸಲ್ಲಿಸಲು ಅನಿವಾರ್ಯವಾಗಿದೆ. ಅಲ್ಲದೆ ಅಭ್ಯರ್ಥಿಗಳೊಂದಿಗೆ ಅಭ್ಯರ್ಥಿಗಳ ಸೂಚಕರ ವಿವರಗಳು ಕೂಡ ಬೇಕಾಗಿದ್ದು, ಪಟ್ಟಿಗಾಗಿ ಪರದಾಡುವಂತಾಗಿದೆ.
 ಮತದಾರರ ವಿವರ ಅನಿವಾರ್ಯವಾಗಿದ್ದು, ಪರಿಷ್ಕರಣೆ ಅಂತಿಮ ಹಂತಕ್ಕೆ ಬಂದಿದೆ. ಹೀಗಾಗಿ ಕೆಲ ವೇಳೆ ಅಧಿಕಾರಿಗಳೊಂದಿಗೆ ಪರಸ್ಪರ ವಾಗ್ವಾದವೂ ನಡೆಯಿತು. ಈ ಸಂಬಂಧ ಪ್ರಕಟಿಸುವುದಾಗಿ ತಹಸೀಲ್ದಾರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement