ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಂದ್ ಬೆಂಬಲಿಸಿ ಪ್ರತಿಭಟನೆ

Lingaraj Badiger
Updated On : 22 Feb 2013, 11:06 am

ಮಾಗಡಿ: ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಕಾರ್ಮಿಕರ ಸಂಘ ಒಗ್ಗೂಡಿ ತಾಲೂಕಿನ ಸೋಲೂರು ಗ್ಯಾಸ್ ಪ್ಲಾಂಟ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ಯಾಸ್ ಕಂಪನಿ ಕಾರ್ಮಿಕರು ಕಳೆದ ಎರಡು ದಿನಗಳಿಂದಲೂ ಇಡೀ ಕಂಪನಿ ಬಂದ್ ಮಾಡಿ ಲಾರಿಗಳ ಲೋಡ್‌ಗಳನ್ನು ಕೆಳಗೆ ಇಳಿಸದಂತೆ  ಪ್ರತಿಭಟನಾ ಧರಣೆ ನಡೆಸಿದರು.
ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡಬೇಕು. ಗುತ್ತಿಗೆ ಪದ್ಧತಿ ತೊಲಗಬೇಕು. ತಿಂಗಳಿಗೆ ಕನಿಷ್ಠ ವೇತನ 10 ಸಾವಿರ ನೀಡಬೇಕು.ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಬೇಡ, ರೈತರು ಬೆಳೆದ ಬೆಳೆಗೆ ಬಂಬಲ ಬೆಲೆ ನೀಡಬೇಕು.
ಸಾರ್ವಜನಿಕ ಕೈಗಾರಿಕೆಗಳು ಖಾಸಗೀಕರಣ ನಿಲ್ಲಿಸಬೇಕು. ಪಡಿತರ ವಿತರಣೆಯಲ್ಲಿ ತಾರತಮ್ಯ ಹೋಗಲಾಡಿಸಿ, ಏಕರೀತಿ ಪಡಿತರ ವ್ಯವಸ್ಥೆ ಕಲ್ಪಸಿಬೇಕು. ಕಳೆದ 5 ವರ್ಷಳಿಂದ ಗ್ಯಾಸ್ ಫ್ಯಾಕ್ಟರಿಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನ ಹೆಚ್ಚಿಸಬೇಕು. ಒಟ್ಟಾರೆ ಕಾರ್ಮಿಕರ ಕಲ್ಯಾಣಕ್ಕಾಗಿ ಮೂಲಸವಲತ್ತು ಕಲ್ಪಿಸುವಂತೆ ಪ್ರಾಂತ ರೈತ ಸಂಘದ ವನಜಾ ಆಗ್ರಹಿಸಿದರು.
ಅಂಥೋಣಿರಾಜ್ ರಂಗಸ್ವಾಮಯ್ಯ, ಹೊನ್ನಪ್ಪ, ಶಿವಣ್ಣ, ಮುದ್ದಯ್ಯ, ಶ್ರೀನಿವಾಸ್, ರಾಜಣ್ಣ, ಹೊನನಮುದ್ದುಪ್ಪ, ಭಾಗ್ಯಮ್ಮ, ಶಾರದಮ್ಮ, ಫಜಲ್ ಲಾಬಿ, ಆಂಜಿನಪ್ಪ, ಹನುಮಂತಯ್ಯ, ಶಂಕರ್, ಮಂಜುನಾಥ್, ನಾಗರಾಜು, ಚಂದ್ರಶೇಖರ್, ಮೂರ್ತಿ ವೆಂಕಟೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement