'ಶುಕ್ರ'ದೆಸೆಗೆ ಕಾಯುತ್ತಿರುವ ಅಭ್ಯರ್ಥಿಗಳು
ದೇವನಹಳ್ಳಿ: ಇಲ್ಲಿನ ಪುರಸಭೆ ಸದಸ್ಯರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಬಾಕಿ ಇದ್ದರೂ, ಇದೂವರೆವಿಗೂ 23 ವಾ ರ್ಡ್ಗ ಳಿಂದ ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಅಥವ ಪಕ್ಷೇತರರಾಗಿ ಸ್ಪರ್ಧಿಸಲು ಯಾರೊಬ್ಬರೂ ತಮ್ಮ ನಾಮಪತ್ರ ಸಲ್ಲಿಸದೆ ಬಹುತೇಕ ಮಂದಿ ಶುಭ ಶುಕ್ರವಾರಕ್ಕಾಗಿ ಕಾಯುತ್ತಿದ್ದಾರೆ.
ಕಾಂಗ್ರೆಸ್ ಮುಖಂಡರ ಪ್ರಕಾರ ಈಗಾಗಲೇ 20 ವಾರ್ಡ್ಗಳಲ್ಲಿ ಅಂತಿಮ ಆಯ್ಕೆ ನಡೆದಿದ್ದು, ಉಳಿದ ಮೂರು ವಾರ್ಡ್ಗಳಲ್ಲಿ ಶುಕ್ರವಾರ ಅಂತಿಮವಾಗಲಿದೆ ಎನ್ನಲಾಗಿದೆ.
ಜೆಡಿಎಸ್ ತಾಲೂಕು ಅಧ್ಯಕ್ಷರ ಪ್ರಕಾರ 10 ವಾರ್ಡ್ಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಉಳಿದ 13 ವಾರ್ಡ್ಗಳ ಅಭ್ಯರ್ಥಿಗಳನ್ನು ಶುಕ್ರವಾರ ಅಂತಿಮಗೊಳಿಸಿ ಎಲ್ಲರಿಗೂ ಬಿ.ಫಾರಂ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿಯಿಂದ ಈಗಾಗಲೇ 20 ವಾರ್ಡ್ಗಳಲ್ಲಿ ಅಭ್ಯರ್ಥಿ ಆಯ್ಕೆ ಮಾಡಲಾಗಿದ್ದು, ಉಳಿದ ವಾರ್ಡ್ಗಳಲ್ಲಿ ಶುಕ್ರವಾರ ತೀರ್ಮಾನವಾಗಲಿದೆ ಎಂದು ಬಿಜೆಪಿ ಅಧ್ಯಕ್ಷರು ತಿಳಿಸಿದ್ದಾರೆ. ಶೇ.95 ರಷ್ಟು ಮಂದಿ ಅಂತಿಮ ದಿನವಾದ ಫೆ.23 ಶನಿವಾರಕ್ಕೆ ಕಾಯದೇ ಎಲ್ಲ ಪಕ್ಷಗಳ ಮತ್ತು ಪಕ್ಷೇತರ ಎಲ್ಲ ಅಭ್ಯರ್ಥಿಗಳು ಶುಭ ಶುಕ್ರವಾರವೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.