ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸ್ಥಾಯಿ ಸಮಿತಿ ಚುನಾವಣೆ; ಲೋಪ ಎಸಗಿಲ್ಲ-ಮುದ್ದರಾಜ್

Lingaraj Badiger
Updated On : 22 Feb 2013, 11:07 am

ರಾಮನಗರ: ಜಿಪಂ ಸ್ಥಾಯಿ ಸಮಿತಿಗಳ ಚುನಾವಣೆ ಸಂಬಂಧ ಸಭಾ ತಿಳುವಳಿಕೆ ಪತ್ರದಲ್ಲಿ ದಿನಾಂಕ ತಪ್ಪಾಗಿರುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಪಿತೂರಿಯ ಸಂಶಯವಿದೆ ಎಂದು ಜಿ.ಪಂ.ಅಧ್ಯಕ್ಷ ಮುದ್ದರಾಜ್ ಯಾದವ್ ಪ್ರತ್ಯಾರೋಪ ಮಾಡಿದ್ದಾರೆ.
ಚುನಾವಣೆ ಪ್ರಕ್ರಿಯೆ ನಿಯಮ ಬದ್ಧವಾಗಿಯೇ ನಡೆದಿದೆ. ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಪಾಲಿಸಲು ಬದ್ಧವಾಗಿದ್ದು, ತಡೆಯಾಜ್ಞೆ ತೆರವಿಗಾಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ತಿಳುವಳಿಕೆ ಪತ್ರದಲ್ಲಿ ದಿನಾಂಕವನ್ನು ಕಾಂಗ್ರೆಸ್ ಸದಸ್ಯರು ತಿದ್ದಿರುವ ಶಂಕೆಯಿದೆ. ಸಂಪ್ರದಾಯದಂತೆ ಪ್ರತಿಪಕ್ಷ ಕಾಂಗ್ರೆಸ್‌ಗೆ ಒಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಜೆಡಿಎಸ್ ನಿರ್ಧರಿಸಿತ್ತು. ಆದರೆ, ಈ ವಿಷಯದಲ್ಲಿ ಕಾಂಗ್ರೆಸ್ ಸದಸ್ಯರು ಮಾತುಕತೆಗೆ ಬರಲೇ ಇಲ್ಲ. ಈಗ ಹತಾಶರಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಟೀಕಿಸಿದರು.
ಚುನಾವಣೆ ಮುಂದೂಡುವಂತೆ ಕಾಂಗ್ರೆಸ್ ಸದಸ್ಯರು ಲಿಖಿತವಾಗಿ ಯಾವುದೇ ಮನವಿಯನ್ನೂ ತಮಗೆ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎಲ್.ಚಂದ್ರ, ರಘುಕುಮಾರ್, ಸದಸ್ಯರಾದ ಗೀತಾ, ಎಚ್.ಸಿ.ರಾಜು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement