ದೇವನಹಳ್ಳಿ ಪುರಸಭೆ: 92 ನಾಮಪತ್ರ 14 ಸ್ಥಾನ ಅವಿರೋಧ ಆಯ್ಕೆ ಸಂಭವ
ದೇವನಹಳ್ಳಿ: ಮಾ.7 ರಂದು ನಡೆಯುವ ದೇವನಹಳ್ಳಿ ಪುರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ 23 ವಾರ್ಡ್ಗಳಿಗೆ 92 ನಾಮಪತ್ರಗಳು ಸಲ್ಲಿಕೆಯಾಗಿವೆ.
ವಿಶೇಷವೆಂದರೆ ವಾರ್ಡ್ ನಂ. 14ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವೈ.ಸಿ.ಸತೀಶ್ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಈ ವಾರ್ಡಿನಲ್ಲಿ ಯಾವುದೇ ರಾಜಕೀಯ ಪಕ್ಷಗಳ ಅಥವ ಪಕ್ಷೇತರ ಅಭ್ಯರ್ಥಿಗಳಾಗಲಿ ನಾಮಪತ್ರ ಸಲ್ಲಿಸಿಲ್ಲ. ಫೆ.25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಸತೀಶ್ಕುಮಾರ್ ಅವರ ನಾಮಪತ್ರ ಸ್ವೀಕಾರವಾದರೆ ಅಧಿಕೃತವಾಗಿ ಅವಿರೋಧ ಸದಸ್ಯರಾಗಿ ಆಯ್ಕೆಯಾಗುತ್ತಾರೆ.
ಫೆ.22 ರಂದು 32 ನಾಮಪತ್ರಗಳು ಸಲ್ಲಿಕೆಯಾಗಿದ್ದು ಶನಿವಾರ 59 ಮಂದಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖವಾಗಿ ಮಾಜಿ ಅಧ್ಯಕ್ಷರಾದ ರತ್ನಮ್ಮ ಗಾರೆ ರವಿಕುಮಾರ್, ವಿ. ಪದ್ಮಾವತಮ್ಮ, ಸದಸ್ಯರುಗಳಾಗಿದ್ದ ಜಿ.ಜನಾರ್ದನ್, ಎನ್.ರಘು, ಜಿ.ಎನ್. ವೇಣುಗೋಪಾಲ್, ಸೋಮಶೇಖರ ಬಾಬು, ಜಿ.ಎ. ರವೀಂದ್ರ, ವಿ.ಹನುಮಂತಪ್ಪ, ಆರ್.ಕುಮಾರ್, ಕೃಷ್ಣಕುಮಾರಿ, ಆರ್.ನಾರಾಯಣಸ್ವಾಮಿ, ಅನಂತಕುಮಾರಿ, ಕಸ್ತೂರಿ ಮಂಜುನಾಥ್, ಕಣದಲ್ಲಿ ಇದ್ದಾರೆ. ಪತ್ರಕರ್ತ ಶಾಂತಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ.