ದೊಡ್ಡಬಳ್ಳಾಪುರ ನಗರಸಭೆ: 29 ಕಡೆ ಜೆಡಿಎಸ್ ಸ್ಪರ್ಧೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ 31 ಸ್ಥಾನಗಳ ಪೈಕಿ 29 ವಾರ್ಡುಗಳಲ್ಲಿ ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 8 ಮತ್ತು 18ನೇ ವಾರ್ಡುಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿಲ್ಲ. ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲಿ ಪಕ್ಷ ಏಕಾಂಗಿ ಹೋರಾಟ ನಡೆಸಲಿದೆ.
ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ ಎಂದು ಪಕ್ಷದ ತಾಲೂಕು ಘಟಕದ ಪ್ರಕಟಣೆ ತಿಳಿಸಿದೆ.ಅಭ್ಯರ್ಥಿಗಳ ವಿವರ ಇಂತಿದೆ: 1ನೇ ವಾರ್ಡ್- ಕೃಷ್ಣಮೂರ್ತಿ, 2ನೇ ವಾರ್ಡ್- ಕೆಂಪರಾಜು, 3ನೇ ವಾರ್ಡ್-ಜೆ.ಪ್ರಕಾಶ್, 4ನೇ ವಾರ್ಡ್-ಸುಧಾಲೋಕೇಶ್, 5ನೇ ವಾರ್ಡ್-ಗೌರಿಶಂಕರ್, 6ನೇ ವಾರ್ಡ್- ರೇಲ್ವೇಸ್ಟೇಷನ್ ಮಲ್ಲೇಶ್, 7ನೇ ವಾರ್ಡ್-ಜಿ.ಸತ್ಯನಾರಾಯಣ, 9ನೇ ವಾರ್ಡ್- ಸುಶೀಲಮ್ಮ, 10ನೇ ವಾರ್ಡ್-ಚಂದ್ರಕಲಾ, 11ನೇ ವಾರ್ಡ್-ರಮೇಶ್, 12ನೇ ವಾರ್ಡ್-ಡಿ.ಜಿ.ಅಶ್ವತ್ಥ್, 13ನೇ ವಾರ್ಡ್-ಭಾಗ್ಯಲಕ್ಷ್ಮಿಕಾಂತರಾಜು, 14ನೇ ವಾರ್ಡ್-ಟಿ.ಎನ್.ಪ್ರಭುದೇವ್, 15ನೇ ವಾರ್ಡ್-ಆರ್.ಪ್ರಭಾನಾಗರಾಜ್, 16ನೇ ವಾರ್ಡ್-ಶಿವಕುಮಾರ್, 17ನೇ ವಾರ್ಡ್-ಪಿ.ಸಿ.ಲಕ್ಷ್ಮೀನಾರಾಯಣ್, 19ನೇ ವಾರ್ಡ್-ನಟರಾಜ್, 20ನೇ ವಾರ್ಡ್-ಇಯಾನ್ಅಬ್ದುಲ್ ಜಾವೇದ್, 21ನೇ ವಾರ್ಡ್-ದೀಪಾ ಮಹೇಶ್, 22ನೇ ವಾರ್ಡ್-ಭಾಸ್ಕರ್, 23ನೇ ವಾರ್ಡ್-ಶಂಶುನ್ನೀಸಾ, 24ನೇ ವಾರ್ಡ್-ಎಸ್.ವಿ.ಸುಜಾತ,
25ನೇ ವಾರ್ಡ್-ಯಶೋಧಮ್ಮ ರಾಜಶೇಖರ್, 26ನೇ ವಾರ್ಡ್-ಅನಸೂಯಮ್ಮ ಸುಬ್ರಹ್ಮಣಿ, 27ನೇವಾರ್ಡ್-ಸುಶೀಲಮ್ಮ ರಾಘವ, 28ನೇ ವಾರ್ಡ್-ವಿ.ಎಸ್.ರವಿಕುಮಾರ್, 29ನೇ ವಾರ್ಡ್-ಜಿ.ರಾಮಕೃಷ್ಣ, 30ನೇ ವಾರ್ಡ್-ಫಯಾಜ್ಪಾಷ, 31ನೇ ವಾರ್ಡ್-ಆರ್.ಗೋವಿಂದರಾಜು.ಕೆಲ ಹಾಲಿ ನಗರಸಭಾ ಸದಸ್ಯರು ಮತ್ತು ಇತರ ಪಕ್ಷಗಳಲ್ಲಿ ಟಿಕೆಟ್ ವಂಚಿತರಾದ ಕೆಲವರಿಗೆ ದೊಡ್ಡಬಳ್ಳಾಪುರ ಜೆಡಿಎಸ್ ಘಟಕ ಈ ಬಾರಿ ಮಣೆ ಹಾಕಿದೆ.