ನಿರಾತಂಕವಾಗಿ ಪರೀಕ್ಷೆ ಎದುರಿಸಿ
ವಿಜಯಪುರ: ವಿದ್ಯಾರ್ಥಿಗಳು ಓದಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪರೀಕ್ಷೆಗಳನ್ನು ನಿರಾಂತಕವಾಗಿ ಎದುರಿಸುವುದರೊಂದಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತರಬೇತುದಾರ ಎಂ.ಶಿವಕುಮಾರ್ ತಿಳಿಸಿದರು. ಅವರು ಪಟ್ಟಣದ ಜೇಸೀಸ್ ಶಾಲೆಯಲ್ಲಿ 10ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವುದು ಹೇಗೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗುರಿ ಮತ್ತು ಸಾಧಿಸುವ ಛಲ ಎರಡು ಕಾರ್ಯತತ್ಪರತೆ ಹೆಚ್ಚಿಸುತ್ತವೆ. ಇದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿ ಅತಂಕ ಮತ್ತು ಭಯ ದೂರವಾಗುತ್ತದೆ. ಆಗ ಯಶಸ್ಸು ತಾನಾಗಿಯೇ ನಮ್ಮ ಬಳಿ ಸುಳಿಯುತ್ತದೆ. ಭವಿಷ್ಯದಲ್ಲಿ ದೊಡ್ಡ ಸಾಧನೆಗೆ ಇಂತಹ ಕಿರು ಸಾಧನೆಗಳು ಪೂರಕವಾಗುತ್ತವೆ ಎಂದರು. ಜೇಸೀಸ್ ಸಂಸ್ಥೆಯ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಮಾತನಾಡಿ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ವಿಶೇಷ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದರು. ಶಾಲಾ ಕಾರ್ಯದರ್ಶಿ ಜೆ.ಆರ್. ಮುನಿವೀರಣ್ಣ, ವಿ.ಎನ್.ರಮೇಶ್, ಯುವ ಜೇಸೀಸ್ ಅಧ್ಯಕ್ಷ ಗಂಗಾಧರ್, ಖಜಾಂಚಿ ಅನೀಸ್, ನಿರ್ದೇಶಕ ಜಾವಿದ್, ಕೃಷ್ಣ, ಮುಖ್ಯ ಶಿಕ್ಷಕ ಮಂಜುನಾಥ್ ಇದ್ದರು.
ಕಾಂಗ್ರೆಸ್ನಿಂದ ಜೆಡಿಎಸ್ ಸೇರ್ಪಡೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಉಷಾ ಪೂರ್ಣಚಂದ್ರ ಅವರು ಕಾಂಗ್ರೆಸ್ಗೆ ರಾಜಿನಾಮೆ ನೀಡಿ ಜೆಡಿಎಸ್ಗೆ ಸೇರ್ಪಡೆಗೊಂಡಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ ಅವರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಎಸ್ಸಿ ಘಟಕ ಉಪಾಧ್ಯಕ್ಷ ಪಿಳ್ಳಮುನಿಶಾಮಪ್ಪ, ತಾಲೂಕು ಕಾರ್ಯದರ್ಶಿ ಜಿ.ಎ. ರವೀಂದ್ರ, ಮುಖಂಡರಾದ ಎಸ್ಎಲ್ಎನ್ ಮುನಿರಾಜು, ಜಿ. ಜನಾರ್ದನ್, ಮಾಜಿ ಪುರಸಭಾಧ್ಯಕ್ಷೆ ಪದ್ಮಾವತಮ್ಮ ಉಪಸ್ಥಿತರಿದ್ದರು. ಉಷಾ ಪೂರ್ಣಚಂದ್ರ ಮಾತನಾಡಿದರು.
ಸಚ್ಚಿದಾನಂದ ಶ್ರೀ ನಿಧನಕ್ಕೆ ಸಂತಾಪ
ಮಾಗಡಿ: ಶಿವಗಂಗೆ ಶೃಂಗೇರಿ ಮಠದ ಸಚ್ಚಿದಾನಂದ ಭಾರತಿ ಮಹಾಸ್ವಾಮೀಜಿ ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ವಿಪ್ರ ಬಾಂಧವ ಯಾತ್ರ ಸಮಿತಿಯ ಅಧ್ಯಕ್ಷ ಪ್ರಸಾದ್ ರಾವ್ ಕಂಬನಿ ಮಿಡಿದರು. ಅವರು ಶ್ರೀರಾಮಮಂದಿರದಲ್ಲಿ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು. ಕೊಂಡಳ್ಳಿ ನಾಗರಾಜು, ಡಿ.ವಿ.ವಂಕಟೇಶ್ ಮೂರ್ತಿ, ಕೆ.ವಿ.ನಾಗರಾಜ ರಾವ್, ರಾಮಚಂದ್ರಭಟ್, ಪ್ರಾಣೇಶ್, ಲಕ್ಷ್ಮೀನಾರಾಯಣ, ರಾಮ್ ರಾವ್ ಹಾಗೂ ಶ್ರೀಮಾತಾ ಮಹಿಳಾ ಮಂಡಲಿ ವತಿಯಿಂದ ಸಂತಾಪ ಸೂಚಿಸಲಾಯಿತು.