ಪ್ರತಿಭೆ ಯಾರೊಬ್ಬರ ಆಸ್ತಿಯಲ್ಲ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆವತಿ ಅನಂತ ವಿದ್ಯಾನಿಕೇತನ ಸಂಯುಕ್ತ ಆಶ್ರಯದಲ್ಲಿ 2ನೇ ರಾಜ್ಯ ಮಟ್ಟದ ವಿಕಲಚೇತನ ಶಾಲಾ ಮಕ್ಕಳ ಅಥ್ಲೆಟಿಕ್ ಕ್ರೀಡಾಕೂಟವನ್ನು ಶನಿವಾರ ಆಯೋಜಿಸಲಾಗಿತ್ತು.
ಈ ಕ್ರೀಡಾಕೂಟದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ 14 ಮತ್ತು 17 ವಯೋವುತಿಯ 962 ವಿಕಲ ಚೇತನ ಬಾಲಕ- ಬಾಲಕಿಯರು ಭಾಗವಹಿಸಿದ್ದರು.
ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತಿರುವರಂಗ ವಿ. ನಾರಾಯಣಸ್ವಾಮಿನೆರವೇರಿಸಿದರು. ಇಂತಹ ಕ್ರೀಡಾಕೂಟಗಳಲ್ಲಿ ವಿಕಲಚೇತನರು ಭಾಗವಹಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ. ವೆಂಕಟೇಶಪ್ಪ ಮಾತನಾಡಿ ಕೇಂದ್ರ ಮತ್ತ್ತುರಾಜ್ಯ ಸರ್ಕಾರಗಳು ವಿಕಲಚೇತನರ ಸರ್ವಾಂಗೀಣ ಬೆಳವಣಿಗೆಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ರಾಜಣ್ಣ ಅವರು ಕ್ರೀಡಾಜ್ಯೋತಿಯನ್ನು ಸ್ವೀಕಾರ ಮಾಡಿದರಲ್ಲದೆ ದೇವನಹಳ್ಳಿ ತಾಲೂಕಿನಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಿಗೆ ವಿಶೇಷವಾದ ಪ್ರೋತ್ಸಾಹ ದೊರೆಯುತ್ತಿದೆ. ತಾಲೂಕು ಶಿಕ್ಷಣದಲ್ಲಿ ಮತ್ತು ಕ್ರೀಡೆಯಲ್ಲಿ ಸಾಧನೆಯಾಗಬೇಕಾದರ ಉಪನಿರ್ದೇಶಕರಾದ ವೆಂಕಟೇಶಪ್ಪರವರೇ ಕಾರಣ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ವೆಂಕಟಸ್ವಾಮಿ ವಹಿಸಿ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಪ್ರತಿಭೆ ಇರುತ್ತದೆ ಅವರಿಗೆ ಪ್ರೋತ್ಸಾಹ ಅಗತ್ಯ ಎಂದರಲ್ಲದೆ ವಿಕಲಚೇತನರಿಗೆ ಏನನ್ನದಾರೂ ಸಾಧಿಸಬಲ್ಲೆ ಎಂಬ ಆತ್ಮ ವಿಶ್ವಾಸ ಮುಖ್ಯವಾಗಿರುತ್ತದೆ ಎಂದು ಪ್ರತಿಪಾದಿಸಿದರು.
ದೈಹಿಕ ಶಿಕ್ಷಣ ಸಹ ವಿರ್ದೇಶಕರಾದ ಬಿ.ಎ. ರಾಜಶೇಖರ್, ಹಿರಿಯ ಸಹಾಯಕ ನಿರ್ದೇಶಕರಾದ ಅನಂತನಾಯಕ್, ರಾಜ್ಯ ದೈಹಿಕ ಶಿ.ಶಿ. ಸಂಘದ ಅಧ್ಯಕ್ಷ ವೆಂಕಟೇಶ್, ಲಯನ್ಸ್ ಸಂಸ್ಥೆಯ ಎಸ್.ಆರ್. ಸತೀಶ್ಕುಮಾರ್ ಅನಂತ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ಕಾರ್ಯದರ್ಶಿ ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.