ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದಿನಿಂದ ನಾಟಕೋತ್ಸವ

Parashurama
Updated On : 25 Feb 2013, 12:43 pm

ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಜಾತ್ರಾ ಸಾಂಸ್ಕೃತಿಕ ಸಮಿತಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನಿಕೇತನ ಟ್ರಸ್ಟ್ ಸಹಯೋಗದಲ್ಲಿ ಫೆ.25 ಮತ್ತು 26ರಂದು ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಫೆ.25ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ ತಾಲೂಕು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರ ಭರತನಾಟ್ಯ, ತಾಲೂಕು ಕಲಾವಿದರ ಸಂಘದ ಕಲಾವಿದರಿಂದ ರಂಗ ದೃಶ್ಯಾವಳಿ, ರಾತ್ರಿ 9.30ರ ನಂತರ ಶ್ರೀಆಂಜನೇಯ ಕೃಪಾಪೋಷಿತ ನಾಟಕ ಮಂಡಲಿಯಿಂದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಯಲಿದೆ.
ಫೆ.26ರಂದು ಸಂಜೆ ಯದ್ಲಳ್ಳಿ ಪಾಪಣ್ಣನವರ ಭಾಗವತ ಯಕ್ಷಗಾನ ಮಂಡಲಿ ವತಿಯಿಂದ ಕರಿರಾಜ
ಚರಿತ್ರೆಯ ಯಕ್ಷಗಾನ ಪ್ರಸಂಗ, ಹಾಸ್ಯ-ಲಾಸ್ಯ ತಂಡದಿಂದ ತರ್ಲೆತಿಮ್ಮ ನಾಟಕ, ಮಧುರೆ ರಾಮಾಂಜಿನಪ್ಪ
ತಂಡದಿಂದ ಗೀತೋಪದೇಶ ಪೌರಾಣಿಕ ನಾಟಕ, ಮುತ್ಯಾಲಮ್ಮ ಕೃಪಾ ಪೋಷಿತ ನಾಟಕ ಮಂಡಲಿ ವತಿಯಿಂದ ಶನಿಪ್ರಭಾವ ನಾಟಕ ಪ್ರದರ್ಶನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement