ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಇತಿಹಾಸ ಪ್ರಸಿದ್ಧ ವೆಂಕಟರಮಣ ರಥೋತ್ಸವ

Parashurama
Updated On : 25 Feb 2013, 12:43 pm

ದೊಡ್ಡಬಳ್ಳಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಫೆ.25ರ ಸೋಮವಾರ ಮಧ್ಯಾಹ್ನ 12.15ರಿಂದ 1.15 ಗಂಟೆಯ ಶುಭಮುಹೂರ್ತದಲ್ಲಿ ತೇರಿನ ಬೀದಿಯಲ್ಲಿ ನಡೆಯಲಿದೆ.
ಬ್ರಹ್ಮರಥೋತ್ಸವ ಅಂಗವಾಗಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಕಲ್ಯಾಣೋತ್ಸವ, ನಿತ್ಯವಾಹನೋತ್ಸವಗಳು ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ತಿರುಮಜ್ಜನಾಲಂಕಾರ, ಶ್ರೀಸ್ವಾಮಿಗೆ ವಿಶೇಷಾಲಂಕಾರ ನಡೆಯಲಿದೆ. 100 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಶ್ರೀಸ್ವಾಮಿಯ ಬೃಹತ್ ಭವ್ಯ ಐದಂತಸ್ತಿನ ತೇರು ತನ್ನ ರಮಣೀಯತೆಯಿಂದ ಆಕರ್ಷಣೆ ಉಳಿಸಿಕೊಂಡಿದೆ. ಫೆ.26ರಂದು ಹಗಲು ಪರಿಷೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಶ್ರೀಆಂಜನೇಯಸ್ವಾಮಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಅರಳುಮಲ್ಲಿಗೆಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಅನ್ನಸಂತರ್ಪಣೆ, ವಿವಿಧ ಅರವಂಟಿಕೆ ಸಮಿತಿಗಳಿಂದ ಅರವಂಟಿಕೆ ಕಾರ್ಯಕ್ರಮಗಳು ಏರ್ಪಾಟಾಗಿವೆ. ಡಿವೈಎಫ್‌ಐ ವತಿಯಿಂದ ಪುಸ್ತಕ ಸಂತೆ ಏರ್ಪಾಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement