ನಾನು ಪಿಯುಸಿಯಲ್ಲಿ ಪಡೆದ ಅಂಕ ಕೇವಲ 21
ದೇವನಹಳ್ಳಿ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಆರ್.ಕೆ.ನಲ್ಲೂರು ಪ್ರಸಾದ್ ಅವರು ಇಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ನಮ್ಮಪ್ಪ ಏನು ಆಗಬೇಕು ಎಂದು ಭಾವಿಸಿದ್ದರೋ ಹಾಗೆ ನಾನು ಆಗಲಿಲ್ಲ. ಆದರೆ ನನಗೆ ಹೇಗೆ ಬೇಕೋ ಹಾಗಾದೆ. ನನಗೆ ಪಿಯುಸಿಯಲ್ಲಿ ಎಲ್ಲ ವಿಷಯಗಳಿಂದ ಪಡೆದ ಒಟ್ಟು ಅಂಕ 21, ಗಣಿತದಲ್ಲಿ ಪಡೆದದ್ದು ಕೇವಲ 1 ಮಾತ್ರ ಎಂದಾಗ ಎಲ್ಲರಿಗೂ ಅಚ್ಚರಿ. ನನಗೆ ಹಾಡು, ಕುಣಿತ, ಪದ್ಯ ಎಂದರೆ ತುಂಬ ಆಸೆ. ಮತ್ತೆ ಯಾರದೋ ಒತ್ತಾಯದಿಂದ ಉನ್ನತ ವ್ಯಾಸಂಗ ಪಡೆದ ನಂತರ ಪಿಎಚ್ಡಿ ಕೂಡ ಮಾಡಿದೆ ಎಂದರು.