ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೊರಾರ್ಜಿ ಶಾಲೆ ನಿರ್ಮಿಸಲು 10 ಕೋಟಿ

Parashurama
Updated On : 25 Feb 2013, 12:43 pm

ಮಾಗಡಿ: ಕಂಬಾಳು ಮತ್ತು ಶಿವಗಂಗೆ ನಡುವೆ 10 ಎಕರೆ ಜಮೀನಿನಲ್ಲಿ  ಬೃಹತ್ತಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಲು 10 ಕೋಟಿ ರು. ಮಂಜುರಾಗಿದೆ ಎಂದು ನೆಲಮಂಗಲ ಶಾಸಕ ಎಂ.ವಿ. ನಾಗರಾಜು  ನುಡಿದರು.
ಅವರು ತಾಲೂಕಿನ ಸೋಲೂರು ಹೋಬಳಿ ಕಲ್ಯಾಣಪುರ ಕಾಲೋನಿಯಲ್ಲಿ ಏರ್ಪಡಿಸಿದ್ದ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಬಾಬಾ ಸಾಹೇಬ್ ಸರ್ವೀಸ್ ಫೋರ್ಸ್  ಗ್ರಾಮ ಘಟಕ ಉದ್ಘಾಟಿಸಿ  ಗ್ರಾಮೀಣ ಭಾಗದ ಶೇ.70 ರಷ್ಟು ಎಸ್ಸಿ ಮತ್ತು ಎಸ್ಟಿಗಳ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.  ಪರಂಪರೆಯಿಂದಲೂ ಕುಲಕಸಬು ಮಾಡಿಕೊಂಡು ಬಂದಿರುವ ಶೋಷಿತ ಕುಟುಂಬಗಳು ಮುಂದೆ ಬರಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು.  ಶಿಕ್ಷಣ ಪಡೆದ ಮಕ್ಕಳು  ಸುಭದ್ರವಾದ ದೇಶವನ್ನು  ಕಟ್ಟಬಲ್ಲರು, ಮೊರಾರ್ಜಿ ವಸತಿ ಶಾಲೆ ನಿಜಕ್ಕೂ ಗ್ರಾಮ ಮಕ್ಕಳ ಅಭ್ಯುದಯಕ್ಕೆ ನಾಂದಿಯಾಗಿದೆ ಎಂದರು.
ಶಾಸಕನ ಸ್ಥಾನ ಶಾಶ್ವತವಲ್ಲ, ನಾವು ಕೈಗೊಂಡ ಅಭಿವೃದ್ಧಿ ಕೆಲಸಗಳೇ ಶಾಶ್ವತ. ಈ ನಿಟ್ಟಿನಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ್ದೇನೆ ಎಂದರಲ್ಲದೆ ಕಲ್ಯಾಣಪುರದಲ್ಲಿ 10 ಲಕ್ಷ ರು. ವೆಚ್ಚದ ಸಾಂಸ್ಕೃತಿಕ ಭವನ ಹಾಗು 10 ಲಕ್ಷ ರು. ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್  ಪ್ರಸಾದ್   ಅಧ್ಯಕ್ಷತೆ ವಹಿಸಿ ಮಾತನಾಡಿ, ನಮಗೆ 5 ವರ್ಷದ ಗುಲಾಮಗಿರಿ ಬೇಡ. ಹಣ, ಹೆಂಡ, ಆಮಿಷಗಳ ಕ್ಷಣಿಕ ಸುಖಕ್ಕೆ ಬಲಿಯಾಗಬೇಡಿ. ಸ್ವಾಭಿಮಾನದ ಸಂಕೇತವಾಗಿರುವ  ಡಾ.ಬಿ.ಆರ್. ಅಂಬೇಡ್ಕರ್,  ಅವರು ನೀಡಿರುವ ಪವಿತ್ರ ಸಂವಿಧಾನಾತ್ಮಕ ಹಕ್ಕನ್ನು ಮತದಾನ ವೇಳೆ ಚಲಾಯಿಸಿ ಸೂಕ್ತ ನಾಯಕನನ್ನು ಆಯ್ಕೆ ಮಾಡಿಕೊಳ್ಳೋಣ ಎಂದರು.
ನಾರಾಯಣಗೌಡ, ಎನ್.ಡಿ.ಎ ಮಾಜಿ ಅಧ್ಯಕ್ಷ ಆನಂದ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ನಾಗರಾಜು, ದೀಪು, ಸಂಪತ್ ಕುಮಾರ್, ಅಶೋಕ್, ಎನ್.ಡಿ.ಎ ಅಧ್ಯಕ್ಷ ಮಲ್ಲಯ್ಯ, ಒಕ್ಕೂಟದ ತಾಲೂಕು ಅಧ್ಯಕ್ಷ ಗುಡೇಮಾರನಹಳ್ಳಿ ನಾಗರಾಜು, ಉಪಾಧ್ಯಕ್ಷ ರಂಗಸ್ವಾಮಿ  ಕಲ್ಯಾಣಪುರ ಗ್ರಾಮ ಘಟಕದ ಅಧ್ಯಕ್ಷ ಮುನಿರಾಜು, ಕಾರ್ಯದರ್ಶಿ ಕೆಂಪಣ್ಣ, ಗೋಪಾಲಕೃಷ್ಣ, ಬೃಂಗೇಶ್, ಶಿವಣ್ಣ, ರವಿ, ರಂಗಯ್ಯ, ಮುನಿಯಪ್ಪ, ರಂಗಸ್ವಾಮಯ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement