ಕುರಿ ಬೇಟೆಗೆ ಬಂದ ನರಿ ನಾಯಿ ಪಾಲು!
ದೇವನಹಳ್ಳಿ: ಇಲ್ಲಿನ ಗೋರಿಪಾಳ್ಯ ರಸ್ತೆಯ ಕುರಿದೊಡ್ಡಿಗೆ ಕುರಿ ತಿನ್ನಲು ಬಂದ ನರಿ ಬೀದಿ ನಾಯಿಗಳ ದಾಳಿಗೆ ಬಲಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ದೇವನಹಳ್ಳಿಯ ಗೋರಿಪಾಳ್ಯ ರಸ್ತೆಯಲ್ಲಿನ ಬಜ್ಜಪ್ಪ-ರತ್ನಮ್ಮ ಎಂಬುವರಿಗೆ ಸೇರಿದ ಕುರಿದೊಡ್ಡಿಯಲ್ಲಿ 11 ಕುರಿಗಳು ಸತ್ತಿದ್ದವು. ಇದಕ್ಕೆ ಕಾರಣ ನಾಯಿಗಳು ಎಂದು ಜನ ತಿಳಿದಿದ್ದರು. ಆದರೆ, ಮಂಗಳವಾರ ರಾತ್ರಿ ನರಿ ಹಳೇ ಬೇಟೆ ಹುಡುಕಿಕೊಂಡು ಬಂದು ನಾಯಿಗಳ ಪಾಲಾಯಿತು. ಇನ್ನೂ ಎರಡು ನರಿಗಳು ಪಲಾಯನವಾಗಿವೆ ಎಂದು ಈ ಸಂದರ್ಭದಲ್ಲಿ ಸ್ಥಳೀಯರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.