ಕೆರೆಗೆ ನೀರು: ನಾಳೆ ಕಾಮಗಾರಿಗೆ ಚಾಲನೆ
ಚನ್ನಪಟ್ಟಣ: ಗರಕಹಳ್ಳಿ ಏತ ನೀರಾವರಿ ಯೋಜನೆ ಮೂಲಕ ತುಂಬಿರುವ ಸುಳ್ಳೇರಿ ಹಾಗೂ ಅವ್ವೇರಹಳ್ಳಿ ಜೋಡಿ ಕೆರೆಗಳಿಗೆ ಬಾಗಿನ ಕಾರ್ಯಕ್ರಮ ಹಾಗೂ ಸಂಕಲಗೆರೆ ಏತ ನೀರಾವರಿ ಮೂಲಕ ಮಳೂರುಪಟ್ಟಣ ಚಕ್ಕೆರೆ ಅಕ್ಕೂರು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶಂಕುಸ್ಥಾಪನಾ ಸಮಾರಂಭವು 25 ರಂದು ಸುಳ್ಳೇರಿ ಗ್ರಾಮದಲ್ಲಿ ನಡೆಯಲಿದೆ. ಜೋಡಿ ಕೆರೆಗಳಿಗೆ ಅರಣ್ಯ ಸಚಿವ ಯೋಗೇಶ್ವರ್ ಬಾಗಿನ ಅರ್ಪಿಸಲಿದ್ದಾರೆ.
ಜಿಲ್ಲಾಧ್ಯಕ್ಷರಾಗಿ ಪಾರ್ಥಸಾರಥಿ
ರಾಮನಗರ: ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಎಚ್.ಎಲ್.ಪಾರ್ಥಸಾರಥಿ ಅವರನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಜಿ. ವೆಂಕಟ ಮಹಿಪಾಲ್ ಘೋಷಿಸಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಂದು ಪಾರ್ಥಸಾರಥಿ ಅವರನ್ನು ಈಗಾಗಲೇ ಪ್ರಕಟಿಸಲಾಗಿತ್ತು.
26ರಂದು ಗಣರಾಜ್ಯೋತ್ಸವ:
ನೆಲಮಂಗಲ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 26ರಂದು ಬೆಳಗ್ಗೆ 9ಕ್ಕೆ ಭಾರತ ಗಣರಾಜ್ಯೋತ್ಸವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆ ಮತ್ತು ಉದ್ಘಾಟನೆ ಶಾಸಕ ಎಂ.ವಿ.ನಾಗರಾಜು ನೆರವೇರಿಸಲಿದ್ದಾರೆ. ತಹಸೀಲ್ದಾರ್ ಆರ್.ಅನಿಲ್‌ಕುಮಾರ್ ಧ್ವಜಾರೋಹಣ ಮತ್ತು ವಂದನೆ ಸ್ವೀಕರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ಇಂಧನ ಸಚಿವ ಎಂ.ವೀರಪ್ಪಮೊಯ್ಲಿ, ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ, ಪುರಸಭಾ ಅಧ್ಯಕ್ಷ ಎನ್.ಆರ್.ಕೃಷ್ಣಮೂತಿ ಮತ್ತಿತರರು ಪಾಲ್ಗೊಳ್ಳುವರು.
ಮಾನವಹಕ್ಕು ಸಮಿತಿ ಘಟಕ ಉದ್ಘಾಟನೆ
ಕನಕಪುರ: ಊಟ, ಬಟ್ಟೆ, ವಸತಿ ಮೊದಲಾದವು ಮಾನವನ ಮೂಲಭೂತ ಅಗತ್ಯಗಳಾಗಿದ್ದು, ಸವಲತ್ತು ದೊರೆಯದಿದ್ದಾಗ ಮಾನವ ಹಕ್ಕು ಸಮಿತಿ ಸಹಾಯ ಪಡೆಯಬಹುದು ಎಂದು ರಾಷ್ಟ್ರೀಯ ಮಾನವಹಕ್ಕು ಸಮಿತಿ ರಾಜ್ಯಾಧ್ಯಕ್ಷ ಎಂ.ಮಧುಗೌಡ ಹೇಳಿದ್ದಾರೆ. ಪಟ್ಟಣದಲ್ಲಿ ರಾಷ್ಟ್ರೀಯ ಮಾನವಹಕ್ಕು ಸಮಿತಿ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ನುಗ್ಗೇನಹಳ್ಳಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಅತಿಥಿಗಳಾಗಿ ಬೆಂಗಳೂರಿನ ಎಸಿಪಿ ರಮೇಶ್‌ಬಾಬು, ಮಾನವಹಕ್ಕು ಆಯೋಗದ ಡಿವೈಎಸ್ಪಿ ಚನ್ನಪ್ಪ ಆಗಮಿಸಿದ್ದರು.
ಇಂದು ಶಂಕುಸ್ಥಾಪನೆ
ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ರಾಮನಗರ ತಾಲೂಕಿನ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾ.ಪಂ.ಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭ ಜ.24 ರಂಗು ನಡೆಯಲಿದೆ.ಬೈರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.