ಹೆತ್ತಳಾ 'ಸುವರ್ಣ' ಮರಿ ಸಲಗ!
ಆನೇಕಲ್ಲು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ಸುವರ್ಣ(34) ಸೋಮವಾರ ಗಂಡು ಮರಿಗೆ ಜನ್ಮ ನೀಡಿದೆ.
ಇದು ಆನೆಯ 5ನೇ ಮರಿಯಾಗಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿದೆ ಎಂದು ಆಡಳಿತಾಧಿಕಾರಿ ಡಾ. ರಾಜು ತಿಳಿಸಿದ್ದಾರೆ. ಈ ಮೊದಲು ಆನೆಗಳ ಸಂಖ್ಯೆ 14 ಇದ್ದು ನೂತನ ಮರಿಯ ಆಗಮನದಿಂದ ಆನೆಗಳ ಸಂಖ್ಯೆ ಪಾರ್ಕಿನಲ್ಲಿ 15 ಆಗಿದೆ. ಇವುಗಳ ಪೈಕಿ 5 ಗಂಡು ಹಾಗೂ 10 ಹೆಣ್ಣಾನೆಗಳಿವೆ ಎಂದಿದ್ದಾರೆ. ಹೆರಿಗೆ ನಂತರ ತಾಯಿ ಆನೆಗೆ ವಿಶೇಷ ಆರೈಕೆ ಮಾಡಲಾಗಿತ್ತು. ಮರಿ ಹಾಗೂ ತಾಯಿ ಇಲ್ಲಿನ ವಾತಾವರಣಕ್ಕೆ ಕ್ರಮೇಣ ಹೊಂದಿಕೊಂಡಿದ್ದು ಜನರ ವೀಕ್ಷಣೆಗೆ ಶುಕ್ರವಾರದ ನಂತರ ಅವಕಾಶ ಮಾಡಿಕೊಡಲಾಗುವುದು ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.