ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

400 ಎಕರೆ ವಿಸ್ತೀರ್ಣದ ವಸತಿ ಯೋಜನೆ ಭೂಮಿಪೂಜೆ

Parashurama
Updated On : 26 Jan 2013, 12:53 pm

ಕನಕಪುರ: ಕರ್ನಾಟಕ ಗೃಹಮಂಡಳಿ ವತಿಯಿಂದ ಕನಕಪುರದ ರಾಯಸಂದ್ರ ಸಮೀಪ ನಿರ್ಮಿಸಲಾಗುತ್ತಿರುವ 400 ಎಕರೆ ವಿಸ್ತೀರ್ಣದ  ವಸತಿಯೋಜನೆಯ ಭೂಮಿಪೂಜೆಯನ್ನು ವಸತಿಸಚಿವ ವಿ.ಸೋಮಣ್ಣ ನೆರವೇರಿಸಿದರು. ಶಾಸಕ ಡಿ.ಕೆ.ಶಿವ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
  ಕನಕಪುರ ಪಟ್ಟಣವು ಕೇಂದ್ರಸರ್ಕಾರದ ಉಪನಗರ ಯೋಜನೆಗೆ ಆಯ್ಕೆಗೊಂಡಿದ್ದು ಗೃಹಮಂಡಳಿ ವತಿಯಿಂದ ಸುಸಜ್ಜಿತ ಸಕಲ ಸೌಕರ್ಯಗಳನ್ನು ಒಳಗೊಂಡ ಬಡಾವಣೆಯನ್ನು ಒಂದು ವರ್ಷದೊಳಗೆ ರೂಪಿಸಲಾಗುವುದು. ಈಗಾಗಲೇ 250 ಎಕರೆಯನ್ನು ಭೂಸ್ವಾಧೀನ ಮಾಡಿಕೊಂಡು ಎಕರೆಯೊಂದಕ್ಕೆ 60 ಲಕ್ಷದಿಂದ 30 ಲಕ್ಷದ ವರೆಗೆ ಪರಿಹಾರ ವಿತರಿಸಲಾಗಿದೆ. ಇದರೊಂದಿಗೆ ಭೂಮಿ ಕಳೆದುಕೊಂಡ ರೈತರಿಗೆ ಎಕರೆಯೊಂದಕ್ಕೆ 40 ್ಗ 30 ನಿವೇಶನವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು. ರಾಯಸಂದ್ರ ದ್ವಿತೀಯ ಹಂತದಲ್ಲಿ 150 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ತಿಯೆ ಚಾಲನೆ ಯಲ್ಲಿದೆ, ಯೋಜನೆಯಲ್ಲಿ ಒಟ್ಟಾರೆ 310 ಕೋಟಿ ವ್ಯಯಿಸಲಾಗುತ್ತಿದ್ದು ಪ್ರಥಮ ಹಂತದಲ್ಲಿ 3,613 ನಿವೇಶನಗಳನ್ನು ನೀಡಲಾಗುತ್ತಿದೆ. ಗೃಹಮಂಡಳಿಯು ರಾಜ್ಯದಾದ್ಯಂತ ಇದುವರೆಗೂ ಒಂದು ಲಕ್ಷದ 16 ಸಾವಿರ ಮನೆಗಳನ್ನು ನಿರ್ಮಿಸಿದೆ. 37 ಸಾವಿರ ನಿವೇಶನಗಳನ್ನು ರೂಪಿಸಿ ಜನರಿಗೆ ಹಸ್ತಾಂತರಿಸಿದೆ. ರಾಜ್ಯಾದ್ಯಂತ 4,700 ಕೋಟಿ ವೆಚ್ಚದಲ್ಲಿ 49 ವಸತಿ ಯೋಜನೆಗಳ ಕಾರ್ಯ ಪ್ರಗತಿಯಲ್ಲಿದೆ,  ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments