ಕ್ಲಸ್ಟರ್ ಮಟ್ಟದ ವಿಶೇಷ ಅಗತ್ಯವುಳ್ಳ ಮಕ್ಕಳ ಕ್ರೀಡಾಕೂಟ
ಸೂಲಿಬೆಲೆ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಾಲ್ಕು ಕ್ಲಸ್ಟರ್ ಮಟ್ಟದ ನಾನಾ ಶಾಲೆಯ ವಿಶೇಷ ಅಗತ್ಯವುಳ್ಳ ಮಕ್ಕಳ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಸರ್ವ ಶಿಕ್ಷಣ ಅಭಿಯಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿಶ್ವ ಅಂಗವಿಲಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಶಿಕ್ಷಕ ಶರಪ್ಪ ಕಂಬಳಿ, ಎಲ್ಲ ವಿದ್ಯಾರ್ಥಿಗಳಲ್ಲಿ ಇರುವಂತ ಸಾಮರ್ಥ್ಯ ವಿಕಲಚೇತನರಲ್ಲಿಯೂ ಇರುತ್ತದೆ. ತಾವೂ ಎಲ್ಲರಂತೆ ಸರ್ಮಥರು ಎಂಬ ಮನೋಭಾವ ಬೆಳೆಸಿಕೊಂಡು ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ದೈಹಿಕ ಮನೋಶಕ್ತಿ ಹೆಚ್ಚಿ ಸಾಧನೆಯ ಗುರಿಯತ್ತ ಮುನ್ನುಗ್ಗಲು ಸಹಾಯಕವಾಗಲಿದೆ. ವಿಕಲಚೇತನರ ಸೇವೆ ದೇವರ ಸೇವೆ ಸಮಾನವಾಗಿದ್ದು,ಇವರನ್ನು ಕೀಳರಿಮೆಯಿಂದ ಕಾಣದೆ ಎಲ್ಲರಂತೆ ಸಮಾನವಾಗಿ ಕಾಣಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ವೈ. ನಾಗರಾಜ್ ಮಾತನಾಡಿ, ಸಾಧಿಸುವ ಛಲವನ್ನು ವಿಕಲಚೇತನರು ಮೈಗೂಡಿಸಿಕೊಳ್ಳಬೇಕು. ತಾವು ಎಲ್ಲರಂತೆ ಬದುಕಿ ಸಾಧಿಸಬಲ್ಲೆ ಎಂಬ ಮನೋಭಾವವೇ ಸಾಧನೆಯ ಶಿಖರಕ್ಕೆ ಮೆಟ್ಟಲು ಎಂದರು.
ಹೊಸಕೋಟೆ ತಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನೆ ಕಾರ್ಯದರ್ಶಿ ಆಶ್ವತ್ಥ್, ಸಿಆರ್ಸಿ ಮುತ್ತುರಾಜ್ ಮಾತನಾಡಿದರು.
ಹೊಸಕೋಟೆ ತಾಲೂಕು ಸಮನ್ವಯ ಶಿಕ್ಷಣಾಧಿಕಾರಿ ಸುಮಂಗಳ, ಟಿ.ಅಗ್ರಹಾರ ಸಿಆರ್ಸಿ ವೆಂಕಟೇಶ್, ಮುಖ್ಯ ಶಿಕ್ಷಕಿ ಓಂಕಾರಮ್ಮ, ಶಿಕ್ಷಕರ ಸಂಘದ ನಿರ್ದೇಶಕ ಪ್ರೇಮಕುಮಾರ್, ಗಾಯಕಿ ಶಾರದ ಹೆಗಡೆ ಸೇರಿದಂತೆ ಸ್ವಯಂ ಸೇವಕರು ಹಾಜರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.