ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚುನಾವಣೆಗಳಲ್ಲಿ ತಪ್ಪದೆ ಮತ ಚಲಾಯಿಸಿ

Parashurama
Updated On : 26 Jan 2013, 1:00 am

ರಾಮನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ತನ್ನದೇ ಆದ ಮಹತ್ವವಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೆ ಮತದಾನ ಸಂವಿಧಾನಬದ್ಧವಾಗಿ ದೊರೆತ ಹಕ್ಕು. ಅದನ್ನು ಅರಿತು, ಚುನಾವಣೆಗಳಲ್ಲಿ ತಪ್ಪದೆ ಮತ ಚಲಾಯಿಸಬೇಕು ಎಂದು  ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್ ಕರೆ ನೀಡಿದರು.
 ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರದ ಗುರುಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾನದ ಹಕ್ಕು ಮತ್ತು ಅದರ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.
ಅರಿವಿನ ಕೊರತೆ ಕಾರಣ: ಭಾರತ ಸಂವಿಧಾನವು 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮತದಾನದ ಹಕ್ಕು ನೀಡಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿ, ಗುರುತಿನ ಚೀಟಿ ಪಡೆದಿರುವ ಅದೆಷ್ಟೋ ಮಂದಿ ತಮ್ಮ ಹಕ್ಕು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ದೇಶದ ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕು ಚಲಾವಣೆ ಮಾಡಬೇಕು. ಮತವನ್ನು ಹಣ, ಇತ್ಯಾದಿ ಆಮಿಷಗಳಿಗೆ ಮಾರಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.  
ಭವಿಷ್ಯ ರೂಪಿಸಿರಿ: ಮತದಾರರು ಜಾಗೃತರಾಗದಿದ್ದಾಗ ಆಳುವ ವರ್ಗವು ಸಹಜವಾಗಿಯೇ ದಿಕ್ಕು ತಪ್ಪುತ್ತದೆ. ಅಧಿಕಾರ ಲಾಲಸೆ, ಸ್ವಾರ್ಥ ಮತ್ತು ಹಣದಾಸೆಯಿಂದ ರಾಜಕಾರಣಿಗಳು ದೇಶದ ಭವಿಷ್ಯವನ್ನೇ ಬಲಿಕೊಡುತ್ತಾರೆ. ಹೀಗಾಗಿ ಮತದಾರರು ಜಾಗಣತರಾಗಿ ದೇಶದ ಭವಿಷ್ಯ ರೂಪಿಸಬೇಕು ಎಂದು  ಉಪನ್ಯಾಸಕ ಶಿವಣ್ಣ ಹೇಳಿದರು.
ಮತದಾನದ ಹಕ್ಕು ಪಡೆದಿರುವ ಪ್ರತಿಯೊಬ್ಬರಿಗೂ ತಮ್ಮನ್ನಾಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಉತ್ತಮ ಅವಕಾಶವನ್ನು ಸಂವಿಧಾನ ನೀಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಹಲವು ಮಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮತದಾನವನ್ನು ವಯೋವೃದ್ಧರು, ಸಾಧು ಸಂತರು ಮತ್ತು ಹಿರಿಯ ರಾಜಕಾರಣಿಗಳು ಇಂದಿಗೂ ಹಬ್ಬದಂತೆ ನೋಡುತ್ತಿದ್ದಾರೆ ಎಂದು ವಿವರಿಸಿದರು.
ತಾತ್ಸಾರ ಮನೋಭವ: ನಗರ-ಪಟ್ಟಣಗಳಲ್ಲಿರುವ ಬುದ್ಧಿವಂತರು, ಶ್ರೀಮಂತರು ಮತದಾನದ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿದ್ದಾರೆ.
 ಈ ಕಾರಣಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಶೇಕಡ 40ಕ್ಕಿಂತ ಕನಿಷ್ಠ ಮತದಾನ ಆಗುತ್ತಿದೆ. ಮತದಾನದ ಹಕ್ಕು ಹೊಂದಲು ವಯೋವುತಿಯನ್ನು 18ಕ್ಕೆ ಇಳಿಸಿದ ನಂತರವೂ ಮತದಾನದ ಪ್ರಮಾಣ ಏರಿಕೆ ಆಗದಿರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನವ ಮತದಾರರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್ ಮತದಾನ ಪ್ರತಿಜ್ಞೆ ಬೋಧಿಸಿ, ಗುರುತಿನ ಚೀಟಿ ವಿತರಿಸಿದರು. ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಡಿ. ಲಿಂಗರಾಜು, ಬಿಇಒ ಮುನಿಕೆಂಪೇಗೌಡ, ತಹಸೀಲ್ದಾರ್ ಹನುಮಂತರಾಯಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments