ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿ ನಾಪತ್ತೆ

Parashurama
Updated On : 26 Jan 2013, 12:58 pm

ಸೂಲಿಬೆಲೆ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ ಎಂದು ಸೂಲಿಬೆಲೆ ಪೊಲೀಸರಿಗೆ ದೂರು ನೀಡಲಾಗಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು 7 ನೇ ತರಗತಿಯ ಕಿಶೋರ್ ಕುಮಾರ್ ಎಂದು ತಿಳಿದು ಬಂದಿದೆ.
ನಂದಗುಡಿ ಹೋಬಳಿ ಚಿಮಾಸಂದ್ರ ನಿವಾಸಿ ಶಿವಣ್ಣ ಎಂಬವವರ ಪುತ್ರನಾದ  ಕಿಶೋರ್‌ಕುಮಾರ್ ಮಧ್ಯಾಹ್ನ ಶಾಲೆಯಲ್ಲಿ ಊಟ ಮಾಡಿ ತರಗತಿಗೆ ಹಾಜರಾಗಿದ್ದಾನೆ. ತರಗತಿಯೊಳಗೆ ಶಿಕ್ಷಕರ ಬರುವ ಮುಂಚೆ ಮೂತ್ರ ವಿಸರ್ಜನೆ ಮಾಡಿ ಬರುವುದಾಗಿ ಸ್ನೇಹಿತರ ಬಳಿ ಹೇಳಿ ಹೋದ ಕಿಶೋರ್ ಮತ್ತೆ ತರಗತಿಗೆ ಹಾಜರಾಗಿಲ್ಲ. ಸಾಧಾರಣ ಮೈಕಟ್ಟು, ಕೋಲ ಮುಖ, ಸುಮಾರು 4 ಅಡಿ ಹೊಂದಿದ್ದು, ಈತನ ಬಲಗಣ್ಣು ಮಾಲುಗಣ್ಣಾಗಿರುತ್ತದೆ.ನಾಪತ್ತೆಯಾದಾಗ ಶಾಲೆ ಸಮವಸ್ತ್ರ ಧರಿಸಿದ್ದು, ಈತನನ್ನು ಕಂಡವರು ಸೂಲಿಬೆಲೆ ಪೊಲೀಸ್ ದೂ.ಸಂಖ್ಯೆ 808-27952415 ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕರ ದೂ.ಸಂಖ್ಯೆ 9448610545 ಸಂಪರ್ಕಿಸಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments