ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶ್ರೀಗಳ ತತ್ವ, ಸಂದೇಶ ಪಾಲಿಸುವ ಮೂಲಕ ಬದಲಾವಣೆಗೆ ಮುಂದಾಗಿ

Parashurama
Updated On : 29 Jan 2013, 11:58 am

ರಾಮನಗರ: ಆದಿಚುಂಚನಗಿರಿ ಮಹಾಸಂಸ್ಥಾನವನ್ನು ಜಾಗತಿಕ ಮಟ್ಟದಲ್ಲಿ ಬೆಳಗುವಂತೆ ಮಾಡಿದ ಕೀರ್ತಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಶ್ರೀಗಳ ತತ್ವ, ಸಂದೇಶಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗಬೇಕು ಎಂದು ಶ್ರೀರಂಗಪಟ್ಟಣ ಚಂದ್ರವನದ ಶ್ರೀ ದುದಂರ್ಡೇಶ್ವರ ಶಿವಯೋಗಿಗಳ ಮಠಾಧೀಶ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಕರೆ ನೀಡಿದರು.  
ತಾಲೂಕು ಕಾಂಗ್ರೆಸ್ ಸಮಿತಿಯಿಂದ ರಾಮನಗರ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುಂಚನಗಿರಿ ಇಂದು ಚಿನ್ನದ ಗಿರಿ ಆಗಲು ಶ್ರೀಗಳ ಕೊಡುಗೆ ಅಪಾರವಾಗಿದೆ. ಬಾಲಗಂಗಾಧರರು ವಿಶ್ವಮಾನವರಾಗಿ ನಮ್ಮ ನಡುವೆ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿ ಹೋಗಿದ್ದಾರೆ ಎಂದರು.
ಕೇವಲ 38 ವರ್ಷಗಳಲ್ಲಿ ಊಹಿಸಲಾಗದ ರೀತಿಯಲ್ಲಿ ಚುಂಚನಗಿರಿ ಮಠವನ್ನು ಅವರು ಬೃಹದಾಕಾರವಾಗಿ ಬೆಳೆಸಿದ್ದಾರೆ. 12ನೇ ಶತಮಾನದ ಬಸವಣ್ಣನವರ ಸಾಧನೆ ಇಂದಿಗೂ ಹೇಗೆ ಪ್ರಸ್ತುತವಾಗಿದೆಯೋ ಹಾಗೆಯೇ ಬಾಲಗಂಗಾಧರರ ತ್ರಿವಿಧ ದಾಸೋಹ, ವನಸಂರಕ್ಷಣೆ ಸಹಿತ ಕ್ರಾಂತಿಕಾರಿ ಕಾರ್ಯಕ್ರಮಗಳು ಸಾವಿರಾರು ವರ್ಷಗಳವರೆಗೆ ಚಿರಸ್ಥಾಯಿಯಾಗಿ ಉಳಿಯಲಿವೆ ಎಂದು ತಿಳಿಸಿದರು.
ಅವಿಸ್ಮರಣೀಯ:  ವಿನಾಶದಂಚಿಗೆ ತಲುಪಿರುವ ಜಾನಪದ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕೆ ಶ್ರೀಗಳ ಕೊಡುಗೆ ಅವಿಸ್ಮರಣೀಯ. ಶಿಕ್ಷಣ, ಕಲೆ, ಸಾಹಿತ್ಯ, ವೈದ್ಯಕೀಯ ಮಾತ್ರವಲ್ಲದೆ ಸಾಮಾಜಿಕವಾಗಿಯೇ ನೂರಾರು ಕಾರ್ಯಕ್ರಮಗಳನ್ನು ಅವರು ರೂಪಿಸಿದ್ದಾರೆ. ಅವರ ಆಶಯ, ದೂರದೃಷ್ಟಿಯಂತೆಯೇ ಚುಂಚನಗಿರಿ ಮಠವನ್ನು ಮುನ್ನಡೆಸಬೇಕಿದೆ. ಸೇವಾ ಕೈಂಕರ್ಯಗಳು ಮುಂದುವರೆಯಬೇಕು ಎಂದು ಆಶಿಸಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ್ಚಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ಸುಮಾರು ಎರಡೂವರೆ ಸಾವಿರದಷ್ಟು ಹಿಂದಿನ ಮಠವನ್ನು ಭಕ್ತರ ಸಹಕಾರ, ಅದೃಷ್ಟ ಮತ್ತು ಆತ್ಮಬಲದೊಂದಿಗೆ ವಿಶ್ವದಲ್ಲೇ ಪ್ರಸಿದ್ಧಿಗೊಳಿಸಿದ ಕೀರ್ತಿ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಲ್ಲಬೇಕು ಎಂದರು. ಮರಳೇಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು, ಪದಾಧಿಕಾರಿಗಳಾದ ಜಯಣ್ಣ, ಕಾಂತರಾಜ್ ಪಟೇಲ್, ವೆಂಕಟೇಶ್, ಸಾಹುಕಾರ್ ಅಮ್ಜದ್, ಎ.ಎನ್.ನಾಗರಾಜು, ಶಿವಲಿಂಗಯ್ಯ, ನವೀನ್‌ಗೌಡ, ದೊಡ್ಡಗಂಗವಾಡಿ ಗೋಪಾಲ್ ಮತ್ತಿತರರು ಭಾಗವಹಿಸಿದ್ದರು. ಅರ್ಚಕರಹಳ್ಳಿಯಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅಂಧರ ಶಾಲೆಯ ಮಕ್ಕಳಿಗೆ ಹೊದಿಕೆಗಳನ್ನು ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments