ಬೆಂಗಳೂರು ಗ್ರಾಮಾಂತರ

ಹುತಾತ್ಮರ ದಿನಾಚರಣೆ


ಸೂಲಿಬೆಲೆ: ಇಲ್ಲಿಗೆ ಸಮೀಪದ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಬಲ್ಲಿ ಬುಧವಾರ ಹುತಾತ್ಮರ ದಿನಾಚರಣೆಯನ್ನು ಆಚರಿಸಿಲಾಯಿತು.
ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸ್ಕೌಟ್ ಮತ್ತು ಗೈಡ್ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಕಂಬಳಿ ಮಾತನಾಡಿ, ದೇಶಕ್ಕಾಗಿ ರಾಷ್ಟ್ರ ನಾಯಕರ ಸಲ್ಲಿಸಿದ ತ್ಯಾಗ, ಬಲಿದಾನ ಸಂಕೇತವಾಗಿರುವ ಹುತ್ಮಾರ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿತು, ನಾಯಕರಿಗೆ ಗೌರವಾರ್ಪಣಿ ಸಲ್ಲಿಸುವಂತ ಕಾರ್ಯ ನಿರಂತರವಾಗಿ ಆಗಬೇಕು. ದೇಶದ್ಯಾಂತ ಜ.30ರಂದು ಹುತ್ಮಾತರ ದಿನಾಚರಣೆಯನ್ನು ನಡೆಸುತ್ತಿದ್ದು, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇದನ್ನು ನಡೆಸುವಂತೆ ಆದೇಶವಿದೆ. ಈ ಮೂಲಕ ಮಕ್ಕಳು ಹುತಾತ್ಮ ನಾಯಕರನ್ನು ಸ್ಮರಿಸಿದಂತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸೂಲಿಬೆಲೆ ಕ್ಲಸ್ಟರ್ ಸಂಪನ್ಮೂಲಧಿಕಾರಿ ಮುತ್ತುರಾಜ್ ಮಾತನಾಡಿ, ಇಂಥ ಕಾರ್ಯಗಳು ಮಕ್ಕಳಲ್ಲಿ ಉತ್ತಮ ದೇಶ ಭಕ್ತಿ ಮತ್ತು ರಾಷ್ಟ್ರೀಯ ನಾಯಕರ ಬಗ್ಗೆ ಗೌರವ ಬರುತ್ತದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಹುತಾತ್ಮರ ಜೀವನದ ಸರಳತೆ, ತ್ಯಾಗ, ಬಲಿದಾನ, ಚಳವಳಿ ಹಾಗೂ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿದ ಬಗ್ಗೆ ತಿಳಿಸಿಕೊಟ್ಟರು. ಮಕ್ಕಳಿಂದ ರಘುಪತಿ ರಾಘವ ರಾಜರಾಮ್ ಭಜನೆ ಹಾಗೂ ಸರ್ವಧರ್ಮ ಪ್ರಾರ್ಥನೆ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಮುದ್ದಪ್ಪ, ಸಹ ಶಿಕ್ಷಕಿ ಮಂಜುಳಾ, ಸುವರ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?