ಬೆಂಗಳೂರು ಗ್ರಾಮಾಂತರ

ಅನ್ನದಲ್ಲಿ ವಿಷ ಹಾಕಿ ಬೀದಿನಾಯಿಗಳ ಹತ್ಯೆ

ಚನ್ನಪಟ್ಟಣ: ಬೀದಿನಾಯಿಗಳು ಹೆಚ್ಚಾಗಿವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ತಿನ್ನುವ ಅನ್ನದಲ್ಲಿ ವಿಷ ಮಿಶ್ರಣಮಾಡಿ 15ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಂದಿರುವ ಅಮಾನವೀಯ ಘಟನೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮಂಗಳವಾರ ನಡೆದಿದೆ. ಸೋಮವಾರ ರಾತ್ರಿ ಬೀದಿ ತುಂಬ ತಿರುಗಾಡಿ ಕೊಂಡಿದ್ದ ನಾಯಿಗಳು ಬೆಳಗಿನ ಜಾವ ಸತ್ತುಬಿದ್ದಿದ್ದ್ದು, ಈ ಬೀದಿನಾಯಿಗಳಿಂದ ಸಾರ್ವಜನಿಕರಿಗೆ ಇದುವರೆಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲವಾದರೂ ಕೆಲ ಕಿಡಿಗೇಡಿಗಳು  ವಿನಾಕಾರಣ ಅನ್ನದಲ್ಲಿ ವಿಷಬೆರೆಸಿ ನಾಯಿಗಳ ಸಾವಿಗೆ ಕಾರಣವಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ನಮ್ಮ ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿಗಳು ಇದುವರೆಗೆ ಯಾರಿಗೂ ತೊಂದರೆ ನೀಡಿರಲಿಲ್ಲ, ಬೀದಿನಾಯಿಗಳಿಂದಾಗಿ ನಮ್ಮ ಬೀದಿಗೆ ಕಳ್ಳಕಾಕರಿಂದ ರಕ್ಷಣೆ ಸಿಗುತ್ತಿತ್ತು. ಮುಗ್ಧ ಶ್ವಾನಗಳನ್ನು ಯಾವ ಉದ್ದೇಶದಿಂದ ಕೊಂದಿದ್ದಾರೋ ಗೊತ್ತಿಲ್ಲ. ಅವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ರಾತ್ರಿವೇಳೆ ಅಪರಿಚಿತರು ಮತ್ತು ಕಳ್ಳಕಾಕರಿಗೆ ಈ ನಾಯಿಗಳು  ಅಡ್ಡಿಯಾಗಿದ್ದು ದುಷ್ಕರ್ಮಿಗಳು ತಮ್ಮ ಕೆಲಸಗಳಿಗೆ ಅನುಕೂಲವಾಗಲೆಂದು ಈ ಕೃತ್ಯ ಎಸಗಿರಬಹುದೆಂದು ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದು ಘಟನೆಗೆ ಸಂಬಂಧಿಸಿದಂತೆ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸರ್ಕಾರವೇ ಬೀದಿನಾಯಿಗಳ ರಕ್ಷಣೆಗೆ ಕಾನೂನು ಹೊರಡಿಸಿದೆ. ಆದರೆ ಅನ್ನದಲ್ಲಿ ವಿಷ ಬೆರೆಸಿ 15ಕ್ಕೂ ಹೆಚ್ಚು ನಾಯಿಗಳ ಮಾರಣ ಹೋಮ ನಡೆಸಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

ಮಹಾರಾಷ್ಟ್ರ: 3 ತಿಂಗಳು ಬಂದ್ ಆಗಿದ್ದ ಪೆಟ್ರೋಲ್ ಬಂಕ್‌ ಸೀಲ್ ಮಾಡಲು ಹೋದ ಇಂಡಿಯನ್ ಆಯಿಲ್ ಅಧಿಕಾರಿಗೆ 7 ಬಾರಿ ಇರಿತ!

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲಲ್ಲ, ಹೃದಯದಲ್ಲಿದೆ': ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ