ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಗನವಾಡಿ ಕೇಂದ್ರ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ

Vishwanath S
Updated On : 7 Jul 2013, 12:48 pm

ಕ.ಪ್ರ.ವಾರ್ತೆ , ಮಾಗಡಿ , ಜು.6
ಅಂಗನವಾಡಿ ಕೇಂದ್ರಗಳು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅಡಿಪಾಯಗಳಿದ್ದಂತೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಮಾಗಡಿ ತಾಲೂಕಿನ ಪರಂಗಿಚಿಕ್ಕನಪಾಳ್ಯದಲ್ಲಿ  ಅಂಗನವಾಡಿ ಕೇಂದ್ರದ ನೂತನ ಕಟ್ವಡವನ್ನು ಉದ್ಘಾಟಿಸಿ ಮಾತನಾಡುತ್ತಾ  ಗ್ರಾಮೀಣ ಮಕ್ಕಳು ಭವಿಷ್ಯದಲ್ಲಿ ಮುಂದೆ ಬರಬೇಕಾದರೆ ಅಂಗನವಾಡಿ ಕೇಂದ್ರಗಳು ಅತ್ಯಾವಶ್ಯಕವಾಗಿದೆ. ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಸೇರುವ ಮೂಲಕ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಬುನಾದಿ  ಹಾಕಬೇಕು.
ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಪೋಷಕಾಂಷವುಳ್ಳ ಆಹಾರವನ್ನು ನೀಡಬೇಕು. ಗ್ರಾಮೀಣ ಭಾಗದ ಗರ್ಭಿಣಿಯರಿಗೆ ಮಗುವಿನ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಗುಣಮಟ್ಟದ ಪೋಷಕಾಂಶದ ಆಹಾರವನ್ನು ಒದಗಿಸಬೇಕು. ಕಾಲ ಕಾಲಕ್ಕೆ ಅವರ ಆರೋಗ್ಯದ ಬಗ್ಗೆ ನಿಗವಹಿಸಬೇಕು. ಪೋಷಕರು ಸಹ ಕಾರ್ಯಕರ್ತೆಯರಿಗೆ ಸಹಕಾರ ನೀಡಬೇಕು. ಗ್ರಾಮಾಭಿವೃದ್ಧಿ ವಿಚಾರದಲ್ಲಿ  ರಾಜಕೀಯ ಸಲ್ಲದು, ಗ್ರಾಮೀಣ ಸರ್ವತೋಮುಖ ಅಭಿವೃದ್ಧಿಗೆ ಜನತೆ ಕೈಜೋಡಿಸಬೇಕು. ನಿಮ್ಮಲ್ಲರ ಸಹಕಾರ ಮತ್ತು ಪ್ರೋತ್ಸಾಹ ಸದಾ ಇರಲಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ನೇತೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ದಶರಥ ಮಾತನಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಆಟದ ಮೈದಾನಕ್ಕೆ ನಿವೇಶನ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವೆಡೆ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್, ಲಕ್ಷ್ಮಮ್ಮ, ರಂಗಯ್ಯ, ಸುರೇಶ್, ಮೂರ್ತಿ, ತಿಮ್ಮಯ್ಯ, ಬೋರಯ್ಯ, ಶಂಕರ್, ನಾಗರಾಜು, ಯಾಲಕಯ್ಯ, ರಾಜು, ಗುತ್ತಿಗೆದಾರ ಚಂದ್ರಶೇಖರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement