ಎನ್‌ಎಂಎಂಎಸ್ ಪರೀಕ್ಷೆ: ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ
ಗೌರಿಬಿದನೂರು: 2012- 2013ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿಯ 5 ಜನ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ನಡೆಸುವ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಅಮಿತಾ ಎಂ.ಎ., ಪೂಜಾ ಡಿ. ಜೈನ್, ಸಂಜಯ್ ಎಂ.ಎಸ್, ಶಿವಕುಮಾರ್ ಜಿ.ಜಿ., ಶ್ರೀಷಾ ಐತಾಳ್, ತಾಲೂಕಿನಲ್ಲೆ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪರಿಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಮಾಸಿಕವಾಗಿ 500 ಪಡೆಯಲು ಅರ್ಹರಾಗಿದ್ದಾರೆ.
ಉಪ ಪ್ರಾಂಶುಪಾಲ ಎನ್.ಎಸ್. ನಾಗರಾಜ್ ರಾವ್ ಮಾತನಾಡಿ, ತಾಲೂಕಿನಲ್ಲೆ ನಮ್ಮ ಶಿಕ್ಷಣ ಸಂಸ್ಥೆಯ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಶಿಕ್ಷರ ತರಬೇತಿ ಮತ್ತು ವಿದ್ಯಾರ್ಥಿಗಳ ಸಾಧನೆಗೆ ಸಂದ ಗೌರವವಾಗಿದೆ ಎಂದರು.
ಹಿರಿಯ ಶಿಕ್ಷಕ ಡಿ.ಪಿ. ಕಾಂತರಾಜು, ಆಂಗ್ಲ ಉಪನ್ಯಾಸಕ ಎಸ್.ವೆಂಕಟೇಶಮೂರ್ತಿ, ಎನ್.ಆರ್. ರತ್ನವರ್ಮ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಿಕ್ಷಕರಾದ ತಾರಾನಾಥ್ ವಿ.ಆರ್., ಚಂದ್ರಶೇಖರ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.