'ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ'
ನೆಲಮಂಗಲ: ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕರು ಬಾಬು ಜಗಜೀವನ್ರಾಂ ಎಂದು ತಹಸೀಲ್ದಾರ್ ರಾಜೇಂದ್ರ ಅವರು ತಿಳಿಸಿದರು.
ಅವರು ಶನಿವಾರ ತಾಲೂಕು ಕಚೇರಿ ಆವರಣದಲ್ಲಿ ಹಸಿರುಕ್ರಾಂತಿ ಹರಿಕಾರರಾದ ಬಾಬು ಜಗಜೀವನ್ರಾಂ ಅವರ 27ನೇ ವರ್ಷದ ಪುಣ್ಯ ತಿಥಿಯಂದು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉತ್ತಮ ರೀತಿ ಚಾಲನೆ ನೀಡಿ ಈ ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ಹಸಿರು ಕ್ರಾಂತಿಯನ್ನೆ ಹರಿಸಿದ ಕೀರ್ತಿ ಇವರದಾಗಿದೆ ಎಂದು ಹೇಳಿದರು.
ರಾಜಸ್ವ ನಿರೀಕ್ಷಕ ನಂಜಪ್ಪ, ಶಿರಸ್ತೇದಾರ್ ವೆಂಕಟರಮಣಪ್ಪ, ಗ್ರಾಮ ಲೆಕ್ಕಾಧಿಕಾರಿ ರವಿ ಸೇರಿದಂತೆ ನೂರಾರು ಜನ ಇದ್ದರು.