ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಹಿಳಾ ಕಾರ್ಮಿಕರಿಗೆ ಅನ್ಯಾಯ

Vishwanath S
Updated On : 7 Jul 2013, 12:42 pm

ಕ.ಪ್ರ. ವಾರ್ತೆ ,  ಮಾಗಡಿ ,  ಜು.6
ವಿನಾಕಾರಣ ಏಕಾಏಕಿ  ಮಹಿಳಾ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದರ ವಿರುದ್ಧ ಹಾಗೂ ಗುತ್ತಿಗೆದಾರರ ದೌರ್ಜನ್ಯ  ಖಂಡಿಸಿ ಟಿ.ಯು.ಸಿ.ಸಿ. ಅಧ್ಯಕ್ಷ ಜಿ.ಆರ್. ಶಿವಶಂಕರ್ ನೇತೃತ್ವದಲ್ಲಿ ಇಲ್ಲಿನ ಸೋಲೂರು ಬಳಿ ಇರುವ ಯುನಿಸ್ಟೀಲ್  ಆಲ್ಕೋ  ಬ್ಲೆಂಡ್ಸ್  ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ  ಬೃಹತ್ ಪ್ರತಿಭಟನಾ ಧರಣೆ ನಡೆಯಿತು.
 ಇದೇ ವೇಳೆ ಟಿಯುಸಿಸಿ ಅಧ್ಯಕ್ಷ ಜಿ.ಆರ್. ಶಿವಶಂಕರ್ ಮಾತನಾಡುತ್ತಾ ಮಹಿಳೆಯರ ಮೇಲೆ ಅಮಾನುಷ ವರ್ತನೆ ಸಲ್ಲದು. ಇಎಸ್‌ಐ ಮತ್ತು ಭವಿಷ್ಯನಿಧಿ  ನೀಡದೆ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ಅನಾರೋಗ್ಯ ಉಂಟಾದರೆ ಚಿಕಿತ್ಸೆಗೆ ಅಗತ್ಯ ಸೌಕರ್ಯವಿಲ್ಲ, ಮಧ್ಯಾಹ್ನದ ಊಟಕ್ಕೆ ಕ್ಯಾಂಟಿನ್ ಇಲ್ಲ.   ಈ ಲಿಕ್ಕರ್ ಕಂಪನಿ ಕಡುಬಡವರಿಗೆ ಅಗತ್ಯ ಕನಿಷ್ಠ ವೇತನ ನೀಡದೆ ದುಡಿಸಿಕೊಳ್ಳುತ್ತಾ ಕಾನೂನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿಸಿದರು.
ಇಲ್ಲಿ ದುಡಿಯುವ ಮಹಿಳಾ ಕಾರ್ಮಿಕರಿಗೆ ಕಾನೂನು ಬದ್ಧ ಸೌಲತ್ತು ಒದಗಿಸಬೇಕು. ನೇಮಕಾತಿಯಲ್ಲಿ  ಸ್ಥಳೀಯ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಥಳೀಯ ಕಾರ್ಮಿಕ ಕೊರತೆ ಇದ್ದಾಗ ಮಾತ್ರ ಹೊರಗಡೆಯಿಂದ  ಕಾರ್ಮಿಕರನ್ನು ಕರೆ ತರಬಹುದು. ಕಂಪನಿಯಲ್ಲಿ ದುಡಿಯುವ ಕಾರ್ಮಿಕರಿಗೆ ಇಎಸ್‌ಐ ಮತ್ತು ಪಿಎಫ್ ನೀಡಬೇಕು. ಕನಿಷ್ಠ ವೇತನ ನೀಡಬೇಕು.   ಕೆಲಸ ನಿರತರು  ಸಣ್ಣಪುಟ್ಟ ಗಾಯಗೊಂಡಾಗ ಅಗತ್ಯ ಚಿಕಿತ್ಸೆ ಕೊಡಿಸಬೇಕು. ಕ್ಯಾಂಟಿನ್ ಸೌಕರ್ಯ ಒದಗಿಸಬೇಕು. ಗುತ್ತಿಗೆದಾರರ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಮಹಿಳಾ ಕಾರ್ಮಿಕರಿಗೆ ಇರುವ ಹಕ್ಕುಗಳನ್ನು ಕಸಿಯಬಾರದು ಎಂದು ಒತ್ತಾಯಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಎಂ.ನಾಗರಾಜು, ಕಾರ್ಮಿಕರ ಸಂಘಟನೆಯ ರಾಜ್ಯ ಸಂಚಾಲಕ ಬಸವರಾಜು, ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಸೋಲೂರು ಹೋಬಳಿ ಅಧ್ಯಕ್ಷ ಶ್ರೀರಾಮಯ್ಯ, ದಲಿತ ಸೇನೆಯ ಚೇತನ್ ಕೇಶವ, ಮೂರ್ತಿ, ಸುಮಾರು 250ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಪ್ರತಿಭಟನಾ ಧರಣೆಯಲ್ಲಿ ಭಾಗವಹಿಸಿದ್ದರು.  
ಮನವಿ: ನಮ್ಮ ಕಂಪನಿಯಲ್ಲಿ ಎಲ್ಲಾ ರೀತಿಯ ಸೌಲತ್ತುಗಳನ್ನು ನೀಡಲಾಗುತ್ತಿದೆ. ಮಹಿಳಾ ಕಾರ್ಮಿಕ ಉಮಾ ಅವರನ್ನು ಮತ್ತೆ ಕೆಲಸಕ್ಕೆ ತೆಗದುಕೊಳ್ಳಲು ಇನ್ನೆರಡು ದಿನಗಳಲ್ಲಿ ಕಂಪನಿ ನಿರ್ದೇಶಕರಲ್ಲಿ ಚರ್ಚಿಸಿ  ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆವಿಗೂ ಅವಕಾಶ ನೀಡುವಂತೆ  ಕಂಪನಿಯ  ವ್ಯವಸ್ಥಾಪಕ ತ್ಯಾಗರಾಜು ಮತ್ತು ಶೈಲೇಶ್ ಧರಣಿ ನಿರತ ಮುಖಂಡರಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement