ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಿಂದುಳಿದ ವರ್ಗಕ್ಕೆ ಸೂಕ್ತ ಸ್ಥಾನ ನೀಡಿ

Vishwanath S
Updated On : 7 Jul 2013, 12:48 pm

ಮಾಗಡಿ: ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಪ್ರತಿನಿಧಿಗಳಿಗೆ ಸಂಘದಲ್ಲಿ ಸೂಕ್ತ ಸ್ಥಾನಮಾನದ ಅವಕಾಶ ನೀಡುವಂತೆ  ಹಿರಿಯ ಶಿಕ್ಷಕರಾದ ಕೆಂಚನರಸಯ್ಯ, ಎಲ್.ಟಿ. ತಿಮಯ್ಯ, ಎಚ್.ಆರ್. ರಾಮಕೃಷ್ಣಯ್ಯ, ಶ್ರೀನಿವಾಸಮೂರ್ತಿ ಟಿ.ಶ್ರೀನಿವಾಸ್, ಎಂ.ಡಿ. ಹುಚ್ಚಯ್ಯ, ಕೃಷ್ಣ, ರಂಗಸ್ವಾಮಿ, ಗುಲಾಬ್‌ಜಾನ್, ವಹೀದ್, ಗಂಗಾಧರಯ್ಯ, ತಾಯಣ್ಣ, ಮೂರ್ತಿ ಸೇರಿದಂತೆ ಅನೇಕ ದಲಿತ ಶಿಕ್ಷಕರು ಒತ್ತಾಯಿಸಿದ್ದಾರೆ. ಇದೇ 22 ರಂದು ನಡೆಯಲಿರುವ ಎನ್.ಜಿ.ಓ ಚುನಾವಣೆಗೆ ಕೇವಲ ಮೇಲ್ವರ್ಗದವರು ಮಾತ್ರ ಎರಡೆರಡು ಗುಂಪುಗಳನ್ನು ಮಾಡಿಕೊಂಡು ಸಂಘದಲ್ಲಿ ಸ್ಥಾನಮಾನ ಹಂಚಿಕೆ ಮಾಡಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ,  ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದವರಿಗೂ ಸೂಕ್ತ ಸ್ಥಾನಮಾನದ ಅವಕಾಶ ನೀಡಬೇಕು. ಇಲ್ಲದಿದ್ದರೆ ಎನ್.ಜಿ.ಓ ಸಂಘಟನೆಗಳ ಚಟುವಟಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಚರ್ಚಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement