ಬೋದ್‌ಗಯಾ ಸ್ಫೋಟ: ಪ್ರತಿಭಟನೆ
ದೊಡ್ಡಬಳ್ಳಾಪುರ: ಬಿಹಾರದ ವಿಶ್ವಪಾರಂಪರಿಕ ತಾಣವಾಗಿರುವ ಬೋಧ್‌ಗಯಾದಲ್ಲಿ ನಡೆದಿರುವ ಉಗ್ರಗಾಮಿ
ಕೃತ್ಯ, ಸರಣಿ ಬಾಂಬ್ ಸ್ಫೋಟ ಖಂಡಿಸಿ ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಮೇಣದ ಬತ್ತಿ ಹಚ್ಚಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಘಟನೆಗೆ ಕಾರಣವಾದ ಉಗ್ರಗಾಮಿಗಳನ್ನು ಕೂಡಲೇ ಸರ್ಕಾರ ಶಿಕ್ಷಿಸಲು ಕ್ರಮ ಕೈಗೊಳ್ಳಬೇಕು. ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಮಹಾ ಮಾನವತಾವಾದಿ ಬುದ್ಧನ ನೆಲೆಯಲ್ಲಿ ಈ ರೀತಿಯ ರಕ್ತಪಾತದ ಕೃತ್ಯ ನಡೆದಿರುವುದು ಹೇಯ. ದೇಶಾದ್ಯಂತ ಇರುವ ಬೌದ್ಧ ನೆಲೆಗಳು, ಬೌದ್ಧ ಬಿಕ್ಷುಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಬೋದ್‌ಗಯಾದಲ್ಲಿ ನಡೆದ ಬಾಂಬ್‌ದಾಳಿ ಮಾನವೀಯ ಮೌಲ್ಯಗಳ ಅಧಃಪತನದ ಸಂಕೇತ. ಸಾಮರಸ್ಯದ ಬದುಕನ್ನು ಹತ್ತಿರುವ ಇಂತಹ ಪಾಶವೀಕೃತ್ಯಗಳನ್ನು ಸರ್ಕಾರ ಕೊನೆಗಾಣಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ರಾಜುಸಣ್ಣಕ್ಕಿ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಲಕ್ಷ್ಮೀಪತಿ, ದಸಂಸ ತಾಲೂಕು ಪ್ರಧಾನ ಸಂಚಾಲಕ ಕೊ ನಘಟ್ಟ ಮಹೇಶ್, ಗೂಳ್ಯಹನುಮಣ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನರಸಪ್ಪ, ಕಾಂಗ್ರೆಸ್ ನಗರ ಕಾರ್ಯದರ್ಶಿ ಡಿ.ವಿ.ಅಶ್ವತ್ಥಪ್ಪ, ಮರಿಯಪ್ಪ, ವಕೀಲ ಆರ್.ಪ್ರಭಾಕರ್, ರಮೇಶ್ ಸಂಕ್ರಾಂತಿ ಮತ್ತಿತರರು ಸೇರಿದಂತೆ ಅನೇಕರು ಭಾಗವಹಿಸಿದ್ದರು.