ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಪಘಾತ: ನಾಲ್ಕು ಸಾವು

Mainashree
Updated On : 10 Jul 2013, 12:33 pm

ಚಿಕ್ಕಬಳ್ಳಾಪುರ: ಇಂಡಿಕಾ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಹೋದರಿಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಸಂಭವಿಸಿದೆ.
ತಾಲೂಕಿನ ದೊಡ್ಡಮರಳಿ ಗ್ರಾಮದ ರತ್ನಮ (65), ಪಾರ್ವತಮ್ಮ (40), ಪ್ರಮೀಳಮ್ಮ (30) ಮತ್ತು ನಂದಿ ಗ್ರಾಮದ ವೆಂಕಟಲಕ್ಷ್ಮಮ್ಮ (60) ಸ್ಥಳದಲ್ಲಿಯೇ ಮೃತಪಟ್ಟವರು. ಮೃತ ಪಾರ್ವತಮ್ಮರ ಗಂಡ ಚನ್ನಭೈರೇಗೌಡರು ಕಾರನ್ನು ಚಲಾಯಿಸುತ್ತಿದ್ದು, ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಸೊಪ್ಪಹಳ್ಳಿಯಲ್ಲಿ ಬಾಡೂಟ ಕಾರ್ಯಕ್ರಮವನ್ನು ಮುಗಿಸಿಕೊಂಡು ಎನ್‌ಹೆಚ್-7 ಬೈಪಾಸ್‌ನ (ಮಂಚನಬಲೆ ಮಾರ್ಗದ) ಸರ್ವೀಸ್ ರಸ್ತೆಗೆ ಬಂದಾಗ ಮಾಲೂರಿನಿಂದ ಬೆಂಗಳೂರಿಗೆ ಪ್ಲೈವುಡ್‌ನೊಂದಿಗೆ ತೆರಳುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದಿದೆ. ಇದರಿಂದ ಲಾರಿಯಡಿ ಸಿಕ್ಕಿಬಿದ್ದಿದ್ದ ಸಂಪೂರ್ಣವಾಗಿ ನಜ್ಜುಗಜ್ಜಾಗಿದ್ದ ಕಾರನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಕ್ರೇನ್ ಮೂಲಕ ಕಾರನ್ನು ಲಾರಿಯಿಂದ ಬೇರ್ಪಡಿಸಿ, ಮೃತ ದೇಹಗಳನ್ನು ಹೊರ ತೆಗೆಯಲಾಯಿತು.
ಘಟನೆಯ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಎನ್.ಶಿವಪ್ರಸಾದ್, ಡಿವೈಎಸ್ಪಿ ದೇವಯ್ಯ ಭೇಟಿ ನೀಡಿ ಪರಿಶೀಲಿಸಿದರು. ಇದೀಗ ಲಾರಿ ಚಾಲಕ ಯಾದಯ್ಯನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement