ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ವಿಕೃತ ಸಂಸ್ಕೃತಿ ಅಳಿಯದಿದ್ದರೆ ದೇಶಿ ಸೊಗಡು ನಾಶ'

Rashmi Kasaragodu
Updated On : 11 Jul 2013, 11:40 am

ಮಾಗಡಿ: ವಿಕೃತ ಸಂಸ್ಕೃತಿ ಅಳಿಯದಿದ್ದರೆ, ಇನ್ನು ಹತ್ತು ವರ್ಷಗಳಲ್ಲಿ ದೇಶಿ ಸೊಗಡು, ಸಂಸ್ಕೃತಿ ನಾಶವಾಗುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್  ಆತಂಕ ವ್ಯಕ್ತಪಡಿಸಿದರು.  ಅವರು   ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಆರ್ಯವೈಶ್ಯ ಮಂಡಲಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಬಾಳಿಗೊಂದು ಬೆಳಕು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈಚೆಗೆ ಸಂಸ್ಕೃತಿ ಅಳಿಯುತ್ತಿದ್ದು, ಬಹುತೇಕ ಮಂದಿ ವಿಕೃತ ಮನಸ್ಸುಳ್ಳವರಾಗುತ್ತಿದ್ದಾರೆ. ಗುಣ ನೋಡಿ  ಹೆಣ್ಣು ಕೊಡುವ ಸಂಸ್ಕೃತಿ ಬದಲಾಗಿ ಹಣವಂತನಾಗಿದ್ದರೆ ಸಾಕು ಎನ್ನುಷ್ಟರ ಮಟ್ಟಿಗೆ ವಿಕೃತ ಮನಸ್ಸು ಬೆಳೆದಿದೆ. ಗುಣಕ್ಕಿಂತ, ಹಣದಾಹ ಜನರಲ್ಲಿ ಹೆಚ್ಚುತ್ತಿದೆ. ಭೂದಾನ, ಗೋದಾನ,ವಸ್ತುದಾನ, ಹಣದಾನಕ್ಕಿಂತ ಮಿಗಿಲಾದುದು ಸಮಾಧಾನ. ಸಮಾಧಾನವಿದ್ದರೆ ಮಾತ್ರ ನಿಜವಾದ ಸಾರ್ಥಕತೆ ಸಾಧ್ಯ, ಬದುಕಿನಲ್ಲಿ ಆದರ್ಶದ ಬೆಳಕು ಕೊಡುವ ಸಾರ್ಥಕತೆ ಪಡೆಯಬೇಕಿದೆ ಎಂದರು. ಆರ್ಥಿಕ ಅಸಮಾನತೆ, ಮೂಡನಂಬಿಕೆಗಳ ಆಚರಣೆ ದೂರದರ್ಶನಗಳಲ್ಲಿ ಬಿತ್ತರಗೊಳ್ಳುವ ನಕಲಿ ಭವಿಷ್ಯ,  ರೈತ ಕಾರ್ಮಿಕರನ್ನು ಕಡೆಗಣಿಸುತ್ತಿರುವ ಆಡಳಿತ ವ್ಯವಸ್ಥೆ ಹಾಗೂ ಎಲ್ಲಿ ಹುಡುಕಿದರೂ ಬೆಳಕು ಕಾಣುವ ಬದಲಾಗಿ ಕತ್ತಲು ಕಾಣುತ್ತಿದೆ ಎಂದರು.  ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಎಸ್.ಎನ್. ನಟರಾಜು,  ಕುಮಾರ್, ಪ್ರಭಾಕರ್  ಎನ್. ರಾವ್, ಡಾ. ಪ್ರಕಾಶ್, ಗಂ. ದಯಾನಂದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement