ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ: ರಂಗಸ್ವಾಮಿ ಸಲಹೆ

Rashmi Kasaragodu
Updated On : 11 Jul 2013, 1:19 am

ಕ.ಪ್ರ.ವಾರ್ತೆ, ಮಾಗಡಿ.ಜು.10
ಪೋಷಕರೇ ನಿಮ್ಮ ಮಕ್ಕಳನ್ನು ವ್ಯಾಪಾರೀಕರಣಗೊಳ್ಳುತ್ತಿರುವ ಖಾಸಗಿ ಶಾಲೆಯಿಂದ ಬಿಡಿಸಿ, ದಯವಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ ಕಳಕಳಿಯ ಕರೆ ನೀಡಿದರು.
ಅವರು ತಾಲೂಕಿನ ಗುಡೇಮಾರನಹಳ್ಳಿ ಗ್ರಾಮ ಪಂಚಾಯತಿಯ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಈ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ಸರ್ವಪಲ್ಲಿ ಡಾ.ರಾಧಕೃಷ್ಣನ್, ಅಬ್ದುಲ್ ಕಲಾಂ ಇತರರು ಸರ್ಕಾರಿ ಶಾಲೆಯಲ್ಲಿಯೇ ಓದಿ ಈ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅವರಂತೆ ನಿಮ್ಮ ಮಕ್ಕಳು ದೇಶಕ್ಕೆ ಕೊಡುಗೆ ನೀಡಬೇಕಿದೆ. ಕೇವಲ ಶೋಕಿಗಾಗಿ ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದು ಬೇಡ. 1ನೇ ತರಗತಿಯಿಂದ 5ನೇ ತರಗತಿವರೆಗೂ ಸರ್ಕಾರಿ ಶಾಲಾ ಮಕ್ಕಳು ಇಂಗ್ಲಿಷ್ ಕಲಿಯುವ ಅವಕಾಶವನ್ನು ಸರ್ಕಾರ ಕಲ್ಪಿಸಲಿದೆ. ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರ ಸಹಕಾರದಿಂದ ಸೋಲೂರು ಹೋಬಳಿ ವ್ಯಾಪ್ತಿಯ ಸುಮಾರು 67 ಅಂಗನವಾಡಿಗಳನ್ನು ವೇದಾಂತ ಫೌಂಡೇಷನ್ ದತ್ತು ಪಡೆದು ಅಲ್ಲಿನ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶೂ, ಬ್ಯಾಗ್ ಹಾಗೂ ಇತರೆ ಸೌಲತ್ತು ನೀಡುತ್ತಾ  ಶೈಕ್ಷಣಿಕ ಪ್ರಗತಿ ಶ್ರಮಿಸುತ್ತಿದೆ ಎಂದರು.
ಶಿಕ್ಷಕರ ವಸತಿ ಗೃಹ ನಿರ್ಮಾಣಕ್ಕೆ ಒತ್ತು: ಜಿಲ್ಲೆಗೊಂದು ಶಿಕ್ಷಕರ ವಸತಿ ಗೃಹ ಮಂಜೂರಾಗಿತ್ತು. ಪ್ರಭಾವಿ ರಾಜಕಾರಿಣಿಗಳ ಒತ್ತಡದ ನಡುವೆಯೂ ಕ್ಷೇತ್ರದ ಶಿಕ್ಷಕರ ಹಿತದೃಷ್ಟಿಯಿಂದ ಸೋಲೂರು ಹೋಬಳಿಯ ಕೇಂದ್ರದಲ್ಲಿ ಭೂಮಿ ನೀಡುವ ಮೂಲಕ ವಸತಿ ಗೃಹ ನಿರ್ಮಾಣ ಮಂಜೂರಾತಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇದಕ್ಕಾಗಿ 58 ಲಕ್ಷ ರು. ಹಣ ಬಿಡುಗಡೆ ಮಾಡಿಸಿ, ಪಾಯದ ಕಾಮಗಾರಿ ಸಹ ನಡೆದಿದೆ. ಆದರೆ ಕೆಲ ರಾಜಕಾರಣಿಗಳ ಪಿತೂರಿಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಆದರೂ ವಸತಿ ಗೃಹ ನಿರ್ಮಾಣಕ್ಕೆ ಪ್ರಾಮಾಣಿಕ ಹೋರಾಟ ಮಾಡುತ್ತೇನೆ ಎಂದು ರಂಗಸ್ವಾಮಿ ತಿಳಿಸಿದರು.
ಪಡಿತರ ಗೊಂದಲ: ಕ್ಷೇತ್ರದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಪಲಾನುಭವಿಗಳ ಗೊಂದಲವಿದೆ. ಗೊಂದಲ ನಿವಾರಣೆಗೆ ಗ್ರಾಮ  ಸಭೆಗಳಿಗೆ ಕಡ್ಡಾಯವಾಗಿ ಆಯಾ ಪಂಚಾಯ್ತಿ ವ್ಯಾಪ್ತಿಯ ನ್ಯಾಯಬೆಲೆ  ಮಾಲೀಕರು ಸಭೆಗೆ ಹಾಜರಾಗಿ ಮಾಹಿತಿ ನೀಡುವಂತೆ ಪಂಚಾಯ್ತಿ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದರು.
ರೈತ ಸಂಪರ್ಕ ಕೇಂದ್ರ ಮಂಜೂರು:  ಸೋಲೂರು ಹೋಬಳಿ ಕೇಂದ್ರದಲ್ಲಿ ಸುಮಾರು 28 ಲಕ್ಷ ರು. ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ.  ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 2 ಲಕ್ಷ ಲೀಟರ್  ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಮಂಜುರಾತಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಗುಡೇಮಾರನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳ ಗೋಪಾಲಕೃಷ್ಣ ಮಾತನಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲಾಗುತ್ತಿದೆ. ಆದರೂ ಜನರ ಹಿತಕ್ಕಾಗಿ ಟ್ಯಾಂಕರ್ ಮೂಲಕ ನೀರು  ಸರಬರಾಜು ಮಾಡಲು ಶ್ರಮಿಸಿದ್ದೇನೆ. ಈಗಾಗಲೇ ಸೋಲೂರಿಗೆ ನಿರಂತರ ಜೋತಿ ನೀಡಲಾಗುತ್ತಿದೆ. ಗುಡೇಮಾರನಹಳ್ಳಿಗೂ ವಿಸ್ತರಿಸಲು ಅಗತ್ಯ ಕ್ರಮ ವಹಿಸುವಂತೆ ಜಿ.ಪಂ. ಸದಸ್ಯರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆಯಲಾಯಿತು.
ತಾ.ಪಂ. ಸದಸ್ಯೆ ಅನುಸೂಯಮ್ಮ ಕಾಂತರಾಜು ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜನತೆಗೆ ಕರೆ ನೀಡಿದರು. ನೋಡಲ್  ಅಧಿಕಾರಿಯಾಗಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ಭಾಗವಹಿಸಿ  ಇಲಾಖೆ ಪ್ರಗತಿ ಹಾಗೂ ಯೋಜನೆ ಕುರಿತು ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜು, ಕೃಷಿ  ತೋಟಗಾರಿಕೆಯ ಆನಂದ್, ಸಿಡಿಪಿಓ ಇಲಾಖೆಯ ಕೆ. ಎಸ್. ಮಂಜುಳಾದೇವಿ ಇತರರು ಇಲಾಖೆವಾರು ಮಾಹಿತಿ ನೀಡಿದರು.  
ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮೀನಾರಾಯಣ, ಸದಸ್ಯರಾದ ಸುರೇಶ್, ಹೇಮಂತಕುಮಾರ್, ಲಲಿತಮ್ಮ, ಶೀಲಾವತಿ, ಶ್ರೀಧರ್, ಮಂಜುನಾಥ್, ಷಫೀ ಉಲ್ಲಾ, ಶಾಂತಮ್ಮ, ಹೊಸಳಯ್ಯ, ಮಂಜುಳ ಪಿಡಿಓ ಮಹೇಶ್ವರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement