ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ ಭೂಪ

Rashmi Kasaragodu
Updated On : 11 Jul 2013, 1:19 am

ಆನೇಕಲ್: ತಂಗಿಯ ಮದುವೆಗೆ ಸಾಲ ನೀಡಿದಾತ ಹಣ ವಾಪಸ್ ಕೇಳಿದ್ದಕೆ ಕರೆದು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಹೆಚ್.ಎಸ್.ಆರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶುಭ ಕಾರ್ಯಕ್ಕೆ ಸಾಲ ನೀಡಿ ಜೀವ ಕಳೆದಕೊಂಡ ವ್ಯಕ್ತಿ ಕೋದಂಡರಾಮ ರೆಡ್ಡಿ(40) ಹೆಚ್ ಎಸ್ ಆರ್ ಠಾಣಾ ವ್ಯಾಪ್ತಿಯ  ಹರಳೂರು ವಾಸಿ. ವೃತ್ತಿಯಲ್ಲಿ  ರಿಯಲ್ ಎಸ್ಟೇಟ್ ಉದ್ಯಮಿ.  ಸಾಲ ಮರುಪಾವತಿ ಮಾಡುವುದಾಗಿ ನಂಬಿಸಿ ಕೊಲೆ ಮಾಡಿ ತಮಿಳುನಾಡಿನಲ್ಲಿ ಹೂತಿಟ್ಟಿದ್ದ ಭೂಪ ರಾಜೇಶ್ ಅ. ರಾಜಶೇಖರನ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕೂಡ್ಲು ಸೈನಿಕ ಕ್ಯಾಂಪಸ್‌ಗೆ ಆಗಾಗ ಬರುತ್ತಿದ್ದ ರಾಜೇಶ್ ಹಾಗೂ ಕೋದಂಡರಾಮರೆಡ್ಡಿಯ ಗೆಳೆತನ 5 ವರ್ಷಗಳಷ್ಟು ಹಳೆಯದು. ಸೈನ್ಯದಲ್ಲಿ ಕಾಲು ಚಾಲಕನಾಗಿ ಕೆಲಸ ಮಾಡಿದ್ದ ರಾಜೇಶ್ ತನ್ನ ತಂಗಿಯ ಮದುವೆಗೆ ರೂ. 3 ಲಕ್ಷ  ಪಡೆದುಕೊಂಡು ಸಾಲ ವಾಪಸ್ ಕೊಡಲಾಗದೆ ಜೂ.26ರಂದು ರೆಡ್ಡಿಯನ್ನು ಸಾಲ ವಾಪಸ್ ಕೊಡುವ ನೆಪದಲ್ಲಿ ವಿವೇಕನಗರದ ತನ್ನ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ. ಹಾಗೆಯೇ ತನ್ನ ಕಾರಿನಲ್ಲಿ ಹಾಕಿಕೊಂಡು ನೆರೆಯ ತಮಿಳುನಾಡಿನ ಹೊಸೂರು ರಸ್ತೆ ಪಕ್ಕದಲ್ಲಿ ಗುರುತು ಸಿಗದ ಹಾಗೆ ಸುಟ್ಟುಹಾಕಿದ್ದಾನೆ. ನಂತರ ಭಯಗೊಂಡ ರಾಜೇಶ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಇತ್ತ ಕೋದಂಡರಾಮರೆಡ್ಡಿ ಮನೆಯವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಅನುಮಾನಗೊಂಡವರ ಪಟ್ಟಿಯಲ್ಲಿ ರಾಜೇಶ್ ಹೆಸರಿದ್ದು ಆತ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿತು. ಅಚಾನಕ್ ಆಗಿ ಜು.7ರಂದು ಮೊಬೈಲ್‌ಗೆ ಕರೆ ಮಾಡಿದಾಗ ಸ್ಪಂದಿಸಿದ ಆತ ಅಮಾಯಕನಂತೆ ಉತ್ತರಿಸಿದ.
ಪೊಲೀಸ್ ತೀವ್ರವಾಗಿ ಪ್ರಶ್ನಿಸಿದಾಗ ತಪ್ಪು ಒಪ್ಪಿಕೊಂಡು ಹೊಸೂರು ಬಳಿ ಹೂತಿಟ್ಟಿದ್ದ ಶವದ ಸ್ಥಳವನ್ನು ತೋರಿಸಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement