ಬನ್ನೇರುಘಟ್ಟ ಜಿಂಕೆ ಮಾಂಸ ಪ್ರಕರಣ: ತನಿಖೆ ಚುರುಕು
ಆನೇಕಲ್ಲು: ಮಂಗಳವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆಯನ್ನು ಕೊಂದು ಮಾಂಸವನ್ನು ಬಿಟ್ಟು ಓಡಿ ಹೋದವರ ಬಗ್ಗೆ ಸುಳಿವು ದೊರೆತಿದ್ದು ಶೀಘ್ರ ಬಂಧಿಸಲಾಗುವುದು ಎಂದು ಬನ್ನೇರುಘಟ್ಟ ಪಿಎಸ್ಸೈ ಕುಮಾರ ಸ್ವಾಮಿ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಹಳೆಯ ಪಟ್ಟಿಯಲ್ಲಿದ್ದ ಕೆಲ ಅಪರಾಧಿಗಳ ಬಗ್ಗೆ ಮಾಹಿತಿ ಇದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಕೆಲ ತಂಡಗಳನ್ನು ಕಳಿಸಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
ತನಿಖೆ ಪ್ರಗತಿಯಲ್ಲಿದ್ದು ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.