ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಸಸಿ ನೆಡುವ ಕಾರ್ಯಕ್ರಮ

Rashmi Kasaragodu
Updated On : 13 Jul 2013, 12:51 pm

ನೆಲಮಂಗಲ: ಜಯಕರ್ನಾಟಕ ಸಂಘಟನೆ ವತಿಯಿಂದ ತಾಲೂಕು ಘಟಕ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳಿಂದ  ಜುಲೈ 13ರ ಶನಿವಾರ ಬೆಳಿಗ್ಗೆ 11-00 ಗಂಟೆಗೆ ಅರಿಶಿನಕುಂಟೆ ಹಾಗೂ 12-00 ಗಂಟೆಗೆ ಪಟ್ಟಣದ ರಾಯನ್ನಗರದಲ್ಲಿ ಪರಿಸರ ರಕ್ಷಣೆಗೆ  ಜಾಗೃತಿ ಮೂಡಿಸುವ ಸಲುವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಎ.ಎಸ್.ರಾಮಮೂರ್ತಿ ತಿಳಿಸಿದ್ದಾರೆ.
15ರಂದು ಸಂತಸದ ಅಲೆ ಶಿಬಿರ
ನೆಲಮಂಗಲ: ಪಟ್ಟಣದ ಪವಾಡ ಬಸವಣ್ಣ ದೇವರ ಮಠದಲ್ಲಿ ಜೀವನ ಕಲಾ ಸಂಸ್ಥೆಯ ವತಿಯಿಂದ ಗುರುಪೂರ್ಣಿಮೆಯ ಅಂಗವಾಗಿ ಸಂತಸದ ಅಲೆಗಳು ಶಿಬಿರವನ್ನು ಆಯೋಜಿಸಲಾಗಿದೆ.  ಜುಲೈ 15ರ ಸೋಮವಾರದಿಂದ ಜುಲೈ 20ರ ಶನಿವಾರದವರೆಗೂ ಧ್ಯಾನ, ಪ್ರಾಣಾಯಾಮ, ವಿವೇಕ ಮತ್ತು ಜ್ಞಾನ, ಸುದರ್ಶನ ಕ್ರಿಯಾ, ಉಸಿರಾಟದ ಮೂಲಕ ಮಾನಸಿಕ ಒತ್ತಡದ ನಿವಾರಣೆ ಕಾರ್ಯಕ್ರಮವನ್ನು ಸಂಜೆ 6-00 ರಿಂದ 8-30ರವರೆಗೂ ನಡೆಸಲಾಗುವುದು ಎಂದು ಸಂಘಟಕ ಪುಟ್ಟರಾಜು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಲಿತ ಸಂಘಟನೆಗಳ ಒಕ್ಕೂಟದ ಸಭೆ
ನೆಲಮಂಗಲ: ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜುಲೈ 13ರ ಶನಿವಾರದಂದು ಅಧ್ಯಕ್ಷ ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ತಾಲ್ಲೂಕಿನ ದಲಿತರ ಸಮಸ್ಯೆ ಮತ್ತು ದೌರ್ಡನ್ಯಗಳ ಬಗ್ಗೆ ಚರ್ಚಿಸಿ ಅನ್ಯಾಯಕೊಳಗಾಗಿರುವವರ ನೆರವಿಗೆ ಸ್ಪಂದಿಸುವುದು ಮತ್ತು ಸಂಘಟನೆಯ ಬಗ್ಗೆ ಚರ್ಚಿಸಲಾಗುವುದು ಎಂದು ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತಿ ನಿಂದನೆ  ಆರೋಪ: ಬಂಧನ
ನೆಲಮಂಗಲ: ಜಾತಿ ನಿಂದನೆ  ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸಮೂರ್ತಿ ಅಲಿಯಾಸ್ ಕಡಬಗೆರೆ ಶ್ರೀನಿವಾಸ್ರನ್ನು ಬಂಧಿಸಲಾಗಿದೆ ಎಂದು ಡಿ.ವೈ.ಎಸ್ಪಿ ಮಲ್ಲೇಶ್ ಶುಕ್ರವಾರ  ತಿಳಿಸಿದ್ದಾರೆ ಕಡಬಗೆರೆ ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು, ಈ ಪ್ರಕರಣದಡಿ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ  ಶ್ರೀನಿವಾಸ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಅಪಘಾತ: ವ್ಯಕ್ತಿ ಸಾವು
ಮಾಗಡಿ: ಎನ್ಎಚ್ 48ರ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿ ರಸ್ತೆ ಅಪಘಾತದಲ್ಲಿ ಶುಕ್ರವಾರ ವೆಂಕಯ್ಯ (50) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ರಸ್ತೆ ದಾಟುತ್ತಿದ್ದಾಗ ಬೈಕ್ ಸವಾರ ಡಿಕ್ಕಿ ಹೊಡೆದಾಗ ಈ ಘಟನೆ ನಡೆದಿದೆ. ಬೈಕ್ ಸವಾರನಿಗೆ ಗಾಯವಾಗಿ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಕೆಲಕಾಲ ರಸ್ತೆ ತಡೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement