ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ನವಜಾತ ಶಿಶುವಿನ ಮೆದುಳು ಕೆಲವು ಕ್ರಿಯೆಗಳಿಗೆ ಸ್ಪಂದಿಸುತ್ತೆ'

Rashmi Kasaragodu
Updated On : 13 Jul 2013, 12:50 pm

ಕ.ಪ್ರ.ವಾರ್ತೆ   ನೆಲಮಂಗಲ    ಜು.12
ನವಜಾತ ಶಿಶುವಿನ ಮೆದುಳು ಸಹ ಕೆಲವು ಕ್ರಿಯೆಗಳಿಗೆ ಸ್ಪಂದಿಸುತ್ತದೆ. ಅಂತಹ ವಿಶೇಷ ಶಕ್ತಿಮಾನವನ ಮೆದುಳಿಗೆ ಇದೆ ಎಂದು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಂಗರಾಜು ತಿಳಿಸಿದರು.
ಅವರು ಪಟ್ಟಣದ ಬಿ.ಆರ್.ಪಿ ಕಚೇರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಲಿ-ಕಲಿ ವಿಷಯವಾಗಿ ನಡೆಯುತ್ತಿದ್ದ 2 ದಿನಗಳ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಮಗು ಪ್ರತಿ ಕ್ಷಣವು ಸಹ ಹೊಸ ಹೊಸ  ವಿಷಯಗಳನ್ನು ಗ್ರಹಿಸಿ ಕಲಿಯುತ್ತಲೆ ಇರುತ್ತದೆ. ಇಂತಹ ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಕ್ಷರಾಭ್ಯಾಸ ಸೇರಿದಂತೆ ಪಾಠದ ವಿಷಯಗಳನ್ನು ಶಿಕ್ಷಕರು ಕಲಿಸಬೇಕು ಎಂದರು.
ಶಿಕ್ಷಕರಿಗೆ ಶಾಲೆಯಲ್ಲಿ ಬೋಧನೆ ಮಾಡುವಾಗ ಉಂಟಾಗುವ ಸಮಸ್ಯೆಗಳನ್ನು ಆಲಿಸಿ ಸುಲಭ ಬೋಧನಾ ಕ್ರಮದ ಬಗ್ಗೆ ತಿಳಿಸಿ ಶಾಲೆಯಲ್ಲಿ ನಿರ್ವಹಿಸುವ ದಾಖಲೆಗಳು ಮತ್ತು ಸಿ.ಇ.ಸಿ ಅಳವಡಿಕೆಯ ಅಗತ್ಯ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ರಮೇಶ್ ತರಬೇತಿಯ ಉದ್ದೇಶ ತಿಳಿಸಿ ಪಾಠದ ಮುನ್ನ ಶಿಕ್ಷಕರು ಮಾಡಬೇಕಾದ ಚಟುವಟಿಕೆಗಳು ಪಾಠಕ್ಕೆ ಅಣಿಗೊಳಿಸುವ ಬಗ್ಗೆ ತಿಳಿಸಿ ಶಿಕ್ಷಕರಿಗೆ ಬೋಧನೆಯಲ್ಲಿ ಉಂಟಾಗುವ ಸಮಸ್ಯೆ ನಿವಾರಣೆಗೆ ಸಾಕಷ್ಟು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಬಾಲಮೂರ್ತಿ ಅವರು ನಲಿ-ಕಲಿ ಪುನಶ್ಚೇತನಗೊಳಿಸಲು ಉಂಟಾಗುವ ಸವಾಲುಗಳು, ನಿರೀಕ್ಷೆಗಳು, ಟಿ.ಎಲ್.ಎಂ ಚಟುವಟಿಕೆ, ಸಿಸಿಇ, ಆರ್ಟಿಇ ಸೇರಿದಂತೆ ಶಾಲಾ ಆಡಳಿತದ ಬಗ್ಗೆ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement