ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಕ್ಕಳಿಗೆ ಪೌಷ್ಟಿಕಾಂಶಆಹಾರ ನೀಡಬೇಕು: ಶ್ರೀನಿವಾಸ್

Rashmi Kasaragodu
Updated On : 13 Jul 2013, 12:49 pm

ವಿಜಯಪುರ: ಪೋಷಕರು ಮಕ್ಕಳನ್ನು ಶುಭ್ರವಾದ ಸಮವಸ್ತ್ರದೊಂದಿಗೆ ಸರಿಯಾದ ಸಮಯಕ್ಕೆ ಅಂಗನವಾಡಿಗೆ  ಕಳುಹಿಸಬೇಕು ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಜೆ.ಎನ್. ಶ್ರೀನಿವಾಸ್ ತಿಳಿಸಿದರು.ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ಅಂಗನವಾಡಿ ಮಕ್ಕಳ ಆಟಿಕೆ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದರಿಂದ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಜೊತೆಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವೇದಾಂತ ಫೌಂಡೇಷನ್ನ ಸಂಯೋಜನಾಧಿಕಾರಿ ರವೀಂದ್ರ ಜೈನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಹನೀಫುಲ್ಲಾ ಮಾತನಾಡಿ, ವೇದಾಂತ ಸಂಸ್ಥೆಯು ಅಂಗನವಾಡಿ ಯೋಜನೆಯ ಅಡಿಯಲ್ಲಿ ಓರಿಸ್ಸಾ, ರಾಜಸ್ತಾನ್, ಚತ್ತಿಸ್ಘಡ್ ಮತ್ತು ಕರ್ನಾಟಕದಲ್ಲಿ 2008ರಿಂದ ಸುಮಾರು 5ಲಕ್ಷ ಮಕ್ಕಳು ಮತ್ತು 14000 ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅಂಗನವಾಡಿಯ 3-6 ವರ್ಷದ ಮಕ್ಕಳಿಗೆ ಉಚಿತ ಸಮವಸ್ತ್ರ, ಒಂದು ಸಮಯದ ಪೌಷ್ಟಿಕಾಂಶಯುಕ್ತ ಆಹಾರ, ಒದಗಿಸುತ್ತಿದ್ದೇವೆ. ಇದಲ್ಲದೆ ಪ್ರತಿ ಅಂಗನವಾಡಿ ಕೇಂದ್ರಗಳಿಗೆ 1000 ರು.ಮೌಲ್ಯದ ಆಟಿಕೆ ವಸ್ತುಗಳನ್ನು ವಿತರಿಸುತ್ತಿದ್ದೇವೆ ಎಂದರು. ಸಮಾರಂಭದ ಉದ್ಘಾಟನೆಯನ್ನು ಪುರಸಭಾ ಮುಖ್ಯಾಧಿಕಾರಿ ಮುನಿಸ್ವಾಮಿ ನೆರವೇರಿಸಿದರು. ವೇದಾಂತ ಫೌಂಡೇಷನ್ ಕಿರಿಯ ಸಂಯೋಜನಾಧಿಕಾರಿ ವರದರಾಜು, ಪುರಸಭಾ ಸದಸ್ಯರಾದ ಬಿ.ಎನ್.ಭಾರತಿ ಮುನಿಕೃಷ್ಣ, ನಾಗರಾಜ್, ತಿರುಮಲೇಶ್, ಮೂರ್ತಿ, ಅಂಗನವಾಡಿ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರದ ನರ್ಸಗಳು, ಪೋಷಕರು ಮತ್ತಿತರರು ಭಾಗವಹಿಸಿದ್ದರು.
ನೌಕರರ ಸಂಘಟನೆ ಶಿಕ್ಷಕರ  ಸಮುದಾಯವನ್ನು ಕಡೆಗಣಿಸಿವೆ: ನಾಗೇಶ್
ಮಾಗಡಿ: ಹಿಂದಿನ ನೌಕರರ ಸಂಘಟನೆಗಳು ಶಿಕ್ಷಕರ  ಸಮುದಾಯವನ್ನು ಕಡೆಗಣಿಸಿವೆ. ಶಿಕ್ಷಕರಿಗೆ ಕಾನೂನು ಬದ್ಧ ನ್ಯಾಯ ಒದಗಿಸುವುದೇ ನಮ್ಮ ಗುರಿಯಾಗಿದೆ ಎಂದು ಶಿಕ್ಷಕ ಎಚ್.ಪಿ. ನಾಗೇಶ್  ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶುಕ್ರವಾರ ಮಾಗಡಿಯಲ್ಲಿ ಶಿಕ್ಷಕರ ಕ್ಷೇತ್ರದಿಂದ ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ಪ್ರತಿನಿಧಿಸಲು ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಿಕ್ಷಕ ಸಮುದಾಯ ಈಗಾಗಲೇ ಹೊಸಬರಿಗೆ ಅವಕಾಶ ನೀಡಬೇಕೆಂದು ತೀರ್ಮಾನಿಸಿದೆ. ಸೇವಾ ಮನೋಭಾವನೆಯಿಂದ ಸ್ಪಂದಿಸುವ ನನ್ನನ್ನೇ ಬಹುಮತದಿಂದ ಆಯ್ಕೆ ಮಾಡುವುದಾಗಿ ಈಗಾಗಲೇ ಭರವಸೆ ಸಹ ನೀಡಿದೆ. ಅವರ ಆಶೀರ್ವಾದಿಂದಲೇ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದು ಎಂದರು.  ಎ.ಬಿ. ಚಂದ್ರಯ್ಯ ಮಾತನಾಡಿ ಎಚ್.ಪಿ. ನಾಗೇಶ್  ಅವರನ್ನು ಬಹುಮತದಿಂದ ಗೆಲ್ಲಿಸಲು ಶಿಕ್ಷಕರು ಮುಂದಾಗಿದ್ದಾರೆ. ಅವರ ಸೇವೆಗೆ ನಾವು ಸದಾ ಬದ್ಧರಾಗಿದ್ದೇವೆ. ಶಿಕ್ಷಕರ ಸಮಸ್ಯೆ ನಿವಾರಣೆಯೇ ನಮ್ಮ ದ್ಯೇಯ ಎಂದರು.    ಜಿ. ಉಮೇಶ್, ಪ್ರಕಾಶ್, ಎಸ್.ಎನ್. ಗುರುಮೂರ್ತಿ ಇತರರು ಇದ್ದರು.
ಬಣ್ಣದ ಲೋಕದಲ್ಲಿ ನನ್ನನ್ನು ಬೆಳೆಸಿ: ತನುಷ್
ನೆಲಮಂಗಲ: ಪರಿಸರದಲ್ಲಿ ಮರಗಳನ್ನು ಬೆಳೆಸಿ, ಅದೇ ರೀತಿ ಉದಯೋನ್ಮುಖ ಸಿನಿಮಾ ನಟನಾಗಿರುವ ನನ್ನನ್ನು ಬಣ್ಣದ ಲೋಕದಲ್ಲಿ ಬೆಳೆಸಿ ಎಂದು ಅಲೆ ಸಿನಿಮಾ ನಾಯಕ ತನುಷ್ ಸಿನಿಮಾ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಅವರು ಶುಕ್ರವಾರ ಪಟ್ಟಣದ ರೂಪ ಸಿನಿಮಾ ಮಂದಿರದಲ್ಲಿ ತಮ್ಮ ನಟನೆಯ ಅಲೆ ಸಿನಿಮಾವನ್ನು ಪ್ರೇಕ್ಷಕರೊಂದಿಗೆ ವೀಕ್ಷಿಸಿ ನಂತರ ಪ್ರತಿಯೊಬ್ಬ ಪ್ರೇಕ್ಷಕರಿಗೂ ಒಂದೊಂದು ಸಸಿಗಳನ್ನು ನೀಡಿ ಮಾತನಾಡುತ್ತಾ ನಾನು ಸಮೀಪದ ದಾಸನಪುರ ಗ್ರಾಮದವನಾಗಿದ್ದೇನೆ. ಬಾಲ್ಯದಿಂದಲೂ ನೆಲಮಂಗಲದ ಈ ಸಿನಿಮಾ ಮಂದಿರದಲ್ಲಿ ಸಿನಿಮ ನೋಡುತ್ತಾ ಬೆಳೆದವನು. ಅಲೆ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ತನುಷ್ ಅಭಿಮಾನಿಗಳು ಘೋಷಣೆ ಕೂಗಿ ಜೈಕಾರ ಹಾಕುವ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಎತ್ತಿ ಕುಣಿಸಿ ಸಂಭ್ರಮ ಪಟ್ಟರು.
29ಕ್ಕೆ ನೇತ್ರ ತಪಾಸಣೆ
ಟೇಕಲ್: ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕೋಲಾರ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಜಿಲ್ಲಾ ಮತ್ತು ತಾಲೂಕು ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಭಾಗಿತ್ವದಲ್ಲಿ ಜು. 29ರಂದು ಕಣ್ಣಿನ ಪೊರೆ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಟೇಕಲ್ ಆರೋಗ್ಯ ಕೇಂದ್ರದಲ್ಲಿ ನೇತ್ರ ಪರೀಕ್ಷೆ ನಡೆಯಲಿದ್ದು, ತಪಾಸಣೆ ನಂತರ ಪೊರೆಯ ಶಸ್ತ್ರ ಚಿಕಿತ್ಸೆ ಅಗತ್ಯವಿರುವವರಿಗೆ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಅಕ್ಷಯಕುಮಾರ್ ತಿಳಿಸಿದ್ದಾರೆ.
ಯಲ್ಲಪ್ಪ ಆಯ್ಕೆ ಮನವಿ
ಚಿಂತಾಮಣಿ: ಪ್ರೌಢಶಾಲಾ ಸಹ ಶಿಕ್ಷಕರ ಕುಂದು ಕೊರತೆಗಳ ಬಗ್ಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಹೋರಾಟ ಮಾಡುತ್ತಾ ಬಂದಿರುವ ತಮಗೆ ಮತದಾರರು ಆಶೀರ್ವದಿಸಬೇಕೆಂದು ಶಿಕ್ಷಕ ಕೆ.ವಿ.ಯಲ್ಲಪ್ಪ ಮನವಿ ಮಾಡಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸರ್ಕಾರಿ ನೌಕರರ ಸಂಘದ ಚುನಾವಣೆ(ಪ್ರೌಢಶಾಲಾ ವಿಭಾಗಕ್ಕೆ) ಸಂಬಂಧಿಸಿದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement