'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಧ್ಯವರ್ತಿ ಹಾವಳಿಯಿಲ್ಲ'
ನೆಲಮಂಗಲ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ ದಿನಕ್ಕೆ 174 ರು.ಗಳಂತೆ 100 ದಿನ ಉದ್ಯೋಗ ದೊರೆಯುತ್ತದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಎಂದು ಸೋಂಪುರ ಗ್ರಾ.ಪಂ.ಅಧ್ಯಕ್ಷ ತೀರ್ಥಪ್ರಸಾದ್ ತಿಳಿಸಿದರು.
ಅವರು ಸೋಂಪುರ ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 100 ಕುಟುಂಬಗಳಿಗೆ ಜಮೀನುಗಳನ್ನು ಸಮತಟ್ಟು ಮಾಡಲು ಅವಕಾಶವಿದೆ. ಈ ಯೋಜನೆಯ ಉಪಯೋಗ ಮಾಡಿಕೊಳ್ಳಲು ನೇರವಾಗಿ ಫಲಾನುಭವಿಯು ಕ್ರಿಯಾ ಯೋಜನೆ ಸಿದ್ಧಪಡಿಸಿ ಪಂಚಾಯ್ತಿಗೆ ನೀಡಿದರೆ ಅಧಿಕಾರಿಗಳಿಗೆ ಅನುಮೋದಿಸಲು ತಿಳಿಸಲಾಗುತ್ತದೆ ಎಂದರುತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಎಚ್.ಎನ್.ತಿವಾರಿ ಮೊದಲನೆ ಹಂತದ ಸಾಮಾಜಿಕ ಪರಿಶೋಧನೆ ಮಂಡಿಸಿದರು. 2012-13ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಹಣ ಫಲಾನುಭವಿಗಳಿಗೆ ತಲುಪಿದೆ. ಹಾಗೆಯೇ 127 ಕುಟುಂಬಗಳು 5999 ಮಾನವ ದಿನಗಳಲ್ಲ ಕೆಲಸ ಮಾಡಿ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ವರದಿ ನೀಡಿದರು.ಗ್ರಾ.ಪಂ.ಉಪಾಧ್ಯಕ್ಷೆ ಧನಲಕ್ಷ್ಮಿ, ಪಿ.ಡಿ.ಓ ಲಕ್ಷ್ಮೀನಾರಾಯಣ್, ಗ್ರಾ.ಪಂ.ಸದಸ್ಯೆ ಶ್ರೀದೇವಿ, ಕೃಷ್ಣೇಗೌಡ, ಇಂದ್ರಮ್ಮ ಪರಮೇಶ್, ಜಗದೀಶ್, ನೀಲಕಂಠಯ್ಯ, ಶಿವಕುಮಾರ್, ಸಿದ್ದಪ್ಪ, ಬೈಲಪ್ಪ, ಕಾರ್ಯದರ್ಶಿ ಕೆಂಪಗಂಗಯ್ಯ, ಲೆಕ್ಕ ಸಹಾಯಕ ಶ್ರೀನಿವಾಸ್ ಇದ್ದರು.