ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಮಾಜ ಸೇವೆಯತ್ತ ಯುವಕರು ಗಮನಹರಿಸಲಿ: ರಾಜೇಶ್

Rashmi Kasaragodu
Updated On : 13 Jul 2013, 12:50 pm

ಸೂಲಿಬೆಲೆ: ರಾಜಕಾರಣದ ಮೂಲಕ ಯುವ ನಾಯಕರು ಸಮಾಜ ಸೇವೆಯತ್ತ  ಹೆಚ್ಚಿನ ಗಮನಹರಿಸಬೇಕು ಎಂದು ಕಾಂಗ್ರೆಸ್ ಯುವ ನಾಯಕ ರಾಜೇಶ್ ಹೇಳಿದ್ದಾರೆ. ಸೂಲಿಬೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿ  ಈ ಮೂಲಕ ಸಮಾಜ ಸೇವೆ ಮಾಡಲು ಮುಂದಾಗಬೇಕು. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಲ್ಲಿ  ಯುವಕರ ಪಾತ್ರ ಬಹು ಮುಖ್ಯವಾಗಿದೆ. ನನ್ನ ತಂದೆ ಹೊಸಕೋಟೆ ಕ್ಷೇತ್ರದ ಶಾಸಕ ಎನ್.ನಾಗರಾಜ್ ಅಧಿಕಾರದ ಆಸೆಗಾಗಿ ರಾಜಕಾರಣಕ್ಕೆ ಬಂದಿಲ್ಲ. ಸಮಾಜ ಸೇವೆಯ ಮುಖ್ಯ ಗುರಿಯಾಗಿದ್ದು, ಹೊಸಕೋಟೆ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಕೈ ಹಿಡಿದು ಆರ್ಶಿವಾದ ಮಾಡಿರುವ ಕಾರಣ ಕ್ಷೇತ್ರದ ಅಭಿವೃದ್ಧಿಗೆ ದುಡಿಯಲು ಕಾರಣವಾಗಿದೆ. ಮತದಾರರು ಶಾಸಕರ ಮೇಲೆ ಇಟ್ಟಿರುವ ಭರವಸೆಯನ್ನು ನೆರವೇರಿಸುತ್ತಾರೆ. ಸಮಗ್ರ ಕ್ಷೇತ್ರದ ಅಭಿವೃದ್ಧಿಯೇ ಶಾಸಕರ ಗುರಿಯಾಗಿದೆ. ಕಾಂಗ್ರೆಸ್ ಪ್ರಗತಿಪರವಾದ ಯೋಜನೆ ಮುಂದಿನ 5 ವರ್ಷದಲ್ಲಿ ಜಾರಿ ಮಾಡಲಿದೆ ಎಂದರು. ಶಾಂತಿ ಚೇಂಬರ್ ಮಾಲೀಕರಾದ ಚಂದನ್ ಸುನೀಲ್  ಬ್ರದರ್ಸ್ ವತಿಯಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement