ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 13 Jul 2013, 11:54 am

ಡಕಾಯಿತರ ಪತ್ತೆಗೆ 2 ವಿಶೇಷ ತಂಡ ರಚನೆ: ಸ್ಥಳಕ್ಕೆ ಐಜಿಪಿ ಭೇಟಿ
ಕೋಲಾರ:  ಾಲೂಕಿನ ನೆರ್ನಹಳ್ಳಿಯ ಮುನಿಯಪ್ಪ ಎಂಬುವರ ಮನೆಯ ಮೇಲೆ ದಾಳಿ ಮಾಡಿ ನಗ-ನಾಣ್ಯ ದೋಚಿರುವ ಡಕಾಯಿತರ ಪತ್ತೆಗಾಗಿ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ನಿನ್ನೆ ಮಧ್ಯ ರಾತ್ರಿ ಭೇಟಿ ನೀಡಿದ್ದ ಐಜಿಪಿ ಅಮರ್‌ಕುಮಾರ್ ಪಾಂಡೆ ಅವರು ಅದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಂತೆ ವಿಶೇಷ ತಂಡಕ್ಕೆ ಸೂಚಿಸಿದ್ದಾರೆ. 8 ಮಂದಿ ಡಕಾಯಿತರು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದರಿಂದ ಗಾಯಗೊಂಡಿರುವ ಮುನಿಯಪ್ಪ, ನರೇಂದ್ರ, ರತ್ನಮ್ಮ, ಜಯಮ್ಮ, ಜಗದೀಶ್, ಚೇತನ ಅವರನ್ನು ಚಿಕಿತ್ಸೆಗಾಗಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಲಾಗಿದ್ದು, ಇಲ್ಲಿಗೂ ಭೇಟಿ ನೀಡಿದ್ದ ಐಜಿಪಿ ಅಮರ್‌ಕುಮಾರ್ ಪಾಂಡೆ ಅವರು ಹೆಚ್ಚಿನ ಮಾಹಿತಿ ಪಡೆದುಕೊಂಡರು. ಮುನಿಯಪ್ಪ ಮನೆ ಕೆಲಸಗಾರನೊಬ್ಬ ಕಳೆದ 1 ವಾರದಿಂದ ನಾಪತ್ತೆ ಆಗಿರುವುದು ಹಾಗೂ ಮನೆ ಕಾವಲಿಗಾಗಿ ಸಾಕಿದ್ದ ನಾಯಿಯು ಕಾಣದಿರುವುದರಿಂದ ಪೊಲೀಸರು ಈ ಕೃತ್ಯವನ್ನು ಮುನಿಯಪ್ಪ ಅವರಿಗೆ ಗೊತ್ತಿರುವವರೇ ಮಾಡಿರಬೇಕೆಂದು ಶಂಕಿಸಿದ್ದಾರೆ. ಮುನಿಯಪ್ಪ ಅವರು ತಮ್ಮ ಮಗಳ ಮದುವೆಗಾಗಿ ಸಿದ್ಧತೆ ನಡೆಸುತ್ತಿದ್ದು ಚಿನ್ನಾಭರಣ ಮನೆಯಲ್ಲಿಟ್ಟಿರಬಹುದೆಂದು ತಿಳಿದು ಅದನ್ನು ದೋಚಲು ದಾಳಿ ಮಾಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಡಕಾಯಿತರು 170 ಗ್ರಾಂ ತೂಕದ ಸುಮಾರು 4 ಲಕ್ಷ ವೆಚ್ಚದ ಚಿನ್ನಾಭರಣ ಹಾಗೂ 20000 ನಗದು ದೋಚಿ ಪರಾರಿಯಾಗಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ರಾಷ್ಟ್ರ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ: ವೆಂಕಟೇಶಪ್ಪ
ದೇವನಹಳ್ಳಿ: ನಮ್ಮ ರಾಷ್ಟ್ರದಲ್ಲಿ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಪ್ರಗತಿಯಾಗಬೇಕಾದರೆ ಶಿಕ್ಷಕರು ಶಾಲೆಯ ಕೊಠಡಿಗಳಲ್ಲಿ ನೀಡುವ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವರ್ಗಾವಣೆಗೊಂಡಿರುವ ಡಿಡಿಪಿಐ ಹೆಚ್.ವಿ.ವೆಂಕಟೇಶಪ್ಪ ಪ್ರತಿಭಾ ಪುರಸ್ಕಾರದ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು. ದೇವನಹಳ್ಳಿ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ಸಂಘದವರು ಇಲ್ಲಿನ ಗುರುಭವನದಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಿಂತನೆ ಹಾಗೂ ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿನ ಆಯಾ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ  ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಆಯೋಜಿಸಿದ್ದರು. ಸನ್ಮಾನ ಸ್ವೀಕರಿಸಿದ ಡಿಡಿಪಿಐ ವೆಂಕಟೇಶಪ್ಪ ಮಾತನಾಡಿ ಶಿಕ್ಷಕರು ನನ್ನ ಅಕೌಂಟಿನಲ್ಲಿ ಸಾಕಷ್ಟು ಪ್ರೀತಿಯ ಡಿಪಾಸಿಟ್ ಇಟ್ಟಿದ್ದಾರೆ ಎಂದು ತಿಳಿಸಿ ತಾವು ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದ 25 ಮನೆಗಳಿರುವ ಕುಗ್ರಾಮದಲ್ಲಿ ಹುಟ್ಟಿದ್ದು ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಿದ್ದು ಮತ್ತು ಸರ್ಕಾರಿ ಕೆಲಸಕ್ಕೆ  ನಾನೇ ಮೊದಲಿಗನಾಗಿ ಸೇರಿದೆ ಎಂದರು.  ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಗುರುತಿನ ಚೀಟಿ ಹಾಗೂ 2013-14 ನೇ ಸಾಲಿನ ಡೈರಿಯ ಬಿಡುಗಡೆ ಹಾಗೂ ದೇವನಹಳ್ಳಿ ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲೇ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಿಇಒ ಆಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಹನುಮಂತಪ್ಪ, ನಿವೃತ್ತ ಶಿಕ್ಷಕರಾದ ಯಾ.ಚಿ ದೊಡ್ಡಯ್ಯ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿಜಯಪುರದ ಜಿಜೆಸಿಯ ಉಪ ಪ್ರಾಂಶುಪಾಲರಾದ ಜಿ.ರಾಮಚಂದ್ರ ವಹಿಸಿದ್ದರು. ಸನ್ಮಾನಿತರ ಪರವಾಗಿ ಬಿಇಒ ಹನುಮಂತಪ್ಪ ಹಾಗೂ ಯಾ.ಚಿ.ದೊಡ್ಡಯ್ಯ ಮಾತನಾಡಿದರು.   ಪ್ರೌಢಶಾಲಾ ಶಿಕ್ಷಕರ ಸಂಘದ ಜಿ.ಎ.ಚಂದ್ರಶೇಖರ್, ನಟರಾಜ್, ಪ್ರಸನ್ನ ಕುಮಾರ್, ಈಶ್ವರಮೂರ್ತಿ ಉಪಸ್ಥಿತರಿದ್ದರು. ಚನ್ನಹಳ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು, ಪಿ.ಎಂ.ಕೊಟ್ರೇಶ್ ಸ್ವಾಗತ ಕೋರಿದರು, ಅಶ್ವತ್ಥನಾರಾಯಣಸ್ವಾಮಿ ವಂದನೆ ಅರ್ಪಿಸಿದರು.
ಜನಪರ ಬಜೆಟ್: ಮುನಿಯಪ್ಪ
ಶಿಡ್ಲಘಟ್ಟ: ಸಮಾಜದ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಹಾಗೂ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕೆಂಬ ಸಂಕಲ್ಪದೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ 18 ಸಾವಿರ ಕೋಟಿಗೂ ಅಧಿಕ ಹಣ ಮೀಸಲಿಟ್ಟಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement