ಅಧಿಕಾರಕ್ಕೆ ಬಂದ ಮೇಲೆ ಮೇಲ್ವರ್ಗವೇ?
ಬೆಂಗಳೂರು: ಹಿಂದುಳಿದ ವರ್ಗದವರು ಅಧಿಕಾರಕ್ಕೆ ಬಂದ ತಕ್ಷಣವೇ ಬ್ರಾಹ್ಮಣರಾಗುವುದು ಬೇಡ ಎಂದು ಕರ್ನಾಟಕ ಗೃಹ ಮಂಡಳಿ ಆಯುಕ್ತ ಎಸ್.ಎನ್. ಜಯರಾಮ್ ಹೇಳಿದರು. ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಹಾಗೂ ದೇವಾಂಗ ಸಮಾಜ ವಿಚಾರ ವೇದಿಕೆ ಭಾನುವಾರ ಪುರಭವನದಲ್ಲಿ ಆಯೋಜಿಸಿದ್ದ 'ಪ್ರತಿಭಾ 2013 ಪುರಸ್ಕಾರ' ಎಂಬ ಸಮಾರಂಭದಲ್ಲಿ ಮಾತನಾಡಿದರು. ಅಧಿಕಾರಕ್ಕೆ ಬರುವುದಕ್ಕೆ ಹಿಂದುಳಿದ ಜಾತಿ ಹೆಸರು ಬಳಕೆ ಮಾಡಿಕೊಳ್ಳುತ್ತಾರೆ.
ಅಧಿಕಾರಕ್ಕೆ ಬಂದ ಬಳಿಕವೇ ನಾವು ಮೇಲ್ವರ್ಗದವರು ಎಂದು ಬಿಂಬಿಸಿಕೊಳ್ಳಲು ಬ್ರಾಹ್ಮಣ ರೀತಿಯಲ್ಲಿ ನಟಿಸುತ್ತಾರೆ ಇದು ಬೇಡ. ಇಂತಹ ವ್ಯಕ್ತಿತ್ವವನ್ನು ಯಾರೂ ರೂಢಿಸಿಕೊಳ್ಳಬೇಡಿ. ಜಾತಿ- ಮತ ಬಿಟ್ಟು ಸಮಾಜ ಕಟ್ಟುವ ಕೆಲಸ ಮಾಡಿ ಎಂದರು. ಜಾತೀಯತೆಯಿಂದ ಸಮಾಜ ಕಲುಷಿತಗೊಂಡಿದೆ. ಸಮಾಜದಲ್ಲಿ ಹಿಂದುಳಿದ ವರ್ಗದವರಿಗೆ ಇಂದಿಗೂ ಗೌರವ ದೊರೆಯುತ್ತಿಲ್ಲ ಎಂದರು.