ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅನಕೃ ಪ್ರತಿಷ್ಠಾನದ ನಿವೇಶನ ಬಗ್ಗೆ ಸಿಎಂ ಜತೆ ಚರ್ಚೆ

Mainashree
Updated On : 14 Jul 2013, 11:50 am

ಬೆಂಗಳೂರು: ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯ ಮತ್ತು ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ್ ರಾವ್ ಅವರಿಗೆ ಅನಕೃ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಇಬ್ಬರು ಗಣ್ಯರಿಗೂ ಪ್ರಶಸ್ತಿ ನೀಡಿ ಗೌರವಿಸಿದರು.
ನಂತರ ಮಾತನಾಡಿದ ಅವರು, ಹಿರಿಯ ಸಾಹಿತಿ ಹೆಸರಿನಲ್ಲಿ ಕೈಂಕರ್ಯ ನಡೆಸುತ್ತಿರುವ ಅನಕೃ ಪ್ರತಿಷ್ಠಾನಕ್ಕೆ ಸರ್ಕಾರದಿಂದ ಅಗತ್ಯ ನೆರವು ಸಿಗಬೇಕಿದೆ. ಅದನ್ನು ಕೊಡಿಸಲು ಕ್ರಮಕೈಗೊಳ್ಳುತ್ತೇನೆ. ಅನಕೃ ಪ್ರತಿಷ್ಠಾನಕ್ಕೆ ಸೇರಿದ ಜಾಗವೊಂದು ವಿವಾದಕ್ಕೀಡಾಗಿತ್ತು. ಈಗ ಹೈಕೋರ್ಟ್‌ನಲ್ಲಿ ಇತ್ಯಾರ್ಥವಾಗಿದ್ದು, ಕೋರ್ಟ್ ಆದೇಶದಂತೆ ಬಿಡಿಎ ಈಗ ಪ್ರತಿಷ್ಠಾನಕ್ಕೆ ನಿವೇಶನ ನೀಡಬೇಕಿದೆ. ಅದನ್ನು ದೊರಕಿಸುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂದು ಉಮಾಶ್ರೀ ಹೇಳಿದರು. ಮಾ.ಹಿರಣ್ಣಯ್ಯ ನಾಟಕ ಅಭಿನಯದಲ್ಲಿ ನಿರ್ದೇಶಕ ಸೂಚನೆಯಂತೆ ಮಾಡಿದ್ದಕ್ಕಿಂತ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ನಟಸಿದ್ದೇ ಹೆಚ್ಚು. ಅವರು ನಾಟಕಗಳ ಮೂಲಕ ಸಮಾಜದ ಹುಳುಕುಗಳನ್ನು ತೋರಿಸಿದರು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement