ನೀರು ಟ್ಯಾಂಕರ್, ಕೊಳವೆ ಬಾವಿ ಲೋಕಾರ್ಪಣೆ
ಕೃಷ್ಣರಾಜಪುರ: ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಸಮಾಜ ಸೇವಕ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೃಷ್ಣಪ್ಪ ಸ್ವಂತ ವೆಚ್ಚದಲ್ಲಿ ಕೊರೆಸಲಾಗಿರುವ ಕೊಳವೆಬಾವಿ ಉಚಿತ ಕುಡಿಯುವ ನೀರಿನ ಟ್ಯಾಂಕರ್ನ್ನು ಲೋಕಾರ್ಪಣೆ ಮಾಡಲಾಯಿತು. ಮಾನವನ ಜನ್ಮ ಪೂರ್ವಜನ್ಮದ ಪುಣ್ಯ ಎಲ್ಲಾ ಜೀವಿಗಳಿಗಿಂತ ಉತ್ತಮವಾದದ್ದು. ಸಮಾಜದಲ್ಲಿ ಒಳ್ಳೆಯದು ಕೆಟ್ಟದನ್ನು ಅರಿತಿರುವ ಮನುಷ್ಯ, ಜೀವಿತಾವಧಿಯಲ್ಲಿ ಕನಿಷ್ಠ ಒಂದೊಳ್ಳೆಕೆಲಸ ಮಾಡಬೇಕೆಂದರು.
ಧಾರ್ಮಿಕ ಕೈಂಕರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಮನುಷ್ಯನಿಗೆ ಶಾಂತಿ ನೆಮ್ಮದಿ ಸಿಗಲಿದೆ. ನಗರ ಪ್ರದೇಶದಲ್ಲಿ ಯಾಂತ್ರಿಕ ಜೀವನ ಸಾಗಿಸುತ್ತಿರುವ ಮನುಷ್ಯ ಹಣ ಗಳಿಕೆಯಲ್ಲಿ ನಿರತನಾಗಿದ್ದಾನೆ. ಎಷ್ಟೇ ದುಡಿದರೂ ಸಮಾಜಕ್ಕಾಗಿ ಮುಡುಪಾಗಿಟ್ಟ ಅಲ್ಪ ಸ್ವಲ್ಪ ಸಮಯ ಮಾತ್ರ ಸಾರ್ವಜನಿಕವಾಗಿ ಉಳಿಯಲಿದ್ದು ನಮ್ಮ ಅಗಲಿಕೆಯ ನಂತರ ಸಹ ನೆನಪಿನಲ್ಲಿರುತ್ತದೆ ಎಂದರು. ಕುಡಿಯುವ ನೀರಿನ ಟ್ಯಾಂಕರ್ ಸಹ ಖರೀದಿಸಿದ್ದು ಅದನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಉದಯ್ಕುಮಾರ್, ಮುಖಂಡರಾದ ವೇಣುಗೋಪಾಲ್, ತ್ಯಾಗರಾಜ್ ಹಾಗೂ ಭಕ್ತಾದಿಗಳು ಹಾಜರಿದ್ದರಿ. ಗಣೇಶ ಪೂಜೆ, ಕಳಶಾರಾಧನೆ, ಶಾಂತಿಹೋಮ ಸೇರಿದಂತೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.