ಶಾಂತಿನಿಕೇತನ ಪ್ರೌಢಶಾಲೆ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
ಕ.ಪ್ರ.ವಾರ್ತೆ ರಾಮನಗರ ಜು. 14
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಾಂತಿನಿಕೇತನ ಪ್ರೌಢ ಶಾಲೆ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಫಲಿತಾಂಶ: ಬಾಲಕರ ವೈಯಕ್ತಿಕ ವಿಭಾಗ
100 ಮೀ. ಓಟ, 4್ಗ100ಮೀ. ರಿಲೆ, ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ, 200 ಮೀ. ಓಟ, ಶಾಟ್ಪಟ್, ಡಿಸ್ಕ್ ಎಸೆತದಲ್ಲಿ ದ್ವಿತೀಯ ಸ್ಥಾನ, 200 ಮೀ. ಓಟ, 400 ಮೀ. ಓಟ, 1500 ಮೀ. ಓಟ, 3000ಮೀ. ಕಾಲುನಡಿಗೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ತಂಡ ವಿಭಾಗ: ಹ್ಯಾಂಡ್ಬಾಲ್, ಖೋ ಖೋ, ಷಟಲ್ ಬ್ಯಾಡ್ಮಿಂಟನ್, ಬಾಲ್ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ, ಟೇಬಲ್ ಟೆನ್ನಿಸ್ ಮತ್ತು ಚೆಸ್ನಲ್ಲಿ ತಾಲೂಕು ಹಂತಕ್ಕೆ ನೇರ ಪ್ರವೇಶ ಪಡೆದಿದ್ದಾರೆ.
ಬಾಲಕಿಯರ ವೈಯಕ್ತಿಕ ವಿಭಾಗ: 100 ಮೀ.ಓಟ, 200ಮೀ. ಓಟ, 100ಮೀ. ಹರ್ಡಲ್ಸ್ನಲ್ಲಿ 10ನೇ ತರಗತಿಯ ಕೆ.ಮೇಘನಾ ಮೂರು ಆಟಗಳಲ್ಲಿ ಪ್ರಥಮ ಸ್ಥಾನ, 4್ಗ100ಮೀ. ಗುಂಪು ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಾಲಕಿಯ ತಂಡ ವಿಭಾಗ: ಷಟಲ್ ಬ್ಯಾಡ್ಮಿಂಟನ್, ಬಾಲ್ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ, ವಾಲಿಬಾಲ್ ಮತ್ತು ಥ್ರೋಬಾಲ್ಗಳಲ್ಲಿ ದ್ವಿತೀಯ ಹಾಗೂ ಟೇಬಲ್ ಟೆನ್ನಿಸ್, ಚೆಸ್ನಲ್ಲಿ ತಾಲೂಕು ಹಂತಕ್ಕೆ ನೇರ ಪ್ರವೇಶ ಪಡೆದಿದ್ದಾರೆ.
ವೈಯಕ್ತಿಕ ಹಾಗೂ ತಂಡ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸಂಸ್ಥಾಪಕ ಕಾರ್ಯದರ್ಶಿ ಕುಮಾರಸ್ವಾಮಿ, ನಿರ್ದೇಶಕಿ, ಸೌಮ್ಯಕುಮರ್, ಆಡಳಿತಾಧಿಕಾರಿ ಕೆ.ಪಿ.ಶಿವಪ್ಪ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಟಿ.ವಿ.ನಾರಾಯಣ್ ಅಭಿನಂದಿಸಿದ್ದಾರೆ.