ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಆರ್ಥಿಕವಾಗಿ ಹಿಂದುಳಿದಿರುವ ಸಾಹಿತಿಗಳಿಗೆ ನೆರವು ಅಗತ್ಯ'

Rashmi Kasaragodu
Updated On : 16 Jul 2013, 1:28 am

ಚನ್ನಪಟ್ಟಣ: ಸಾಹಿತ್ಯ ಕ್ಷೇತ್ರದಲ್ಲಿ ಅದಮ್ಯ ಸೇವೆ ಮಾಡುತ್ತ ಎಲೆಮರೆಕಾಯಿಯಂತೆ ಜೀವನ ನಡೆಸುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ಸಾಹಿತಿಗಳನ್ನು ಗುರುತಿಸಿ ಸರ್ಕಾರ ಅವರಿಗೆ ಆರ್ಥಿಕ ನೆರವು ನೀಡ ಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ಒತ್ತಾಯ ಮಾಡಿದರು.
ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ತೀರ್ಮಾನದಂತೆ 3ನೇ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ತಾಲೂಕಿನ ಮತ್ತಿಕೆರೆ ಗ್ರಾಮದ ಸರಸ್ವತಿಗೌಡ ಅವರಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು ಕೆಲವು ಸಾಹಿತಿಗಳು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸ ಬೇಕು ಎಂದು ಅಭಿಪ್ರಾಯಪಟ್ಟ ಅವರು ಸಾಹಿತಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕನ್ನಡ ಸಾಹಿತ್ಯ ಪರಿಷತತ್ನೀಡುವ ಆರ್ಥಿಕ ನೆರವನ್ನು ಸದ್ಬಳಿಕೆ ಮಾಡಿಕೊಂಡು ಬೇಗ ಗುಣಮುಖರಾಗ ಬೇಕೆಂದು ಆಶಿಸಿದರು. ಇತ್ತಿಚಿನ ದಿನಗಳಲ್ಲಿ ಸಾಹಿತಿಗಳು ಬರೆದ ಕಥೆ ಕಾದಂಬರಿಗಳು ಮತ್ತು ಕವನ, ಕವಿತೆಗಳನ್ನು ಹಣಕೊಟ್ಟು  ಓದುವವರ ಸಂಖ್ಯೆ ಕ್ಷೀಣವಾಗುತ್ತಿದೆ ಹಾಗಾಗಿ ಪುಸ್ತಕಗಳು ಅಂಗಡಿ ಮಳಿಗೆಗಳಲ್ಲಿ ಮತ್ತು ಸಾಹಿತಿಗಳ ಕೋಣೆಯಲ್ಲಿ ಧೂಳು ಹಿಡಿಯುತ್ತಿವೆ ಎಂದು ವಿಷಾದಿಸಿದರು. ಸರ್ಕಾರ ಮತ್ತು ದಾನಿಗಳು ಸಾಹಿತಿಗಳನ್ನು ಪ್ರೋತ್ಸಾಹಿಸಿದಾಗ ಯುವಕರಿಂದ ಇನ್ನು ಹೆಚ್ಚಿನ ಉನ್ನತ ಮಟ್ಟದ ಸಾಹಿತ್ಯ ಕೃಷಿ ಮಾಡಲು ಸಹಕಾರಿಯಾಗುತ್ತದೆ, ಕನ್ನಡದ ಶ್ರೀಮಂತಿಕೆ ಪ್ರಜ್ವಲವಾಗಿ ಬೆಳೆಯಲು ಅನೂಕೂಲವಾಗುತ್ತದೆ ಹಾಗಾಗಿ ಸಾಹಿತ್ಯಭಿಮಾನಿಗಳು ಇತ್ತ ಚಿತ್ತ ಹರಿಸಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement