ಇಂದಿನ ಪಠ್ಯಗಳಿಂದ ಬೌದ್ಧಿಕ ವಿಕಾಸ ಆಗಲ್ಲ
ಬೆಂಗಳೂರು: ಇಂಗ್ಲಿಷ್ ಲಾಬಿಯಿಂದಾಗಿ ಮಾತೃಭಾಷೆ ಶಿಕ್ಷಣ ಕಡೆಗಣಿಸಲಾಗುತ್ತಿದೆ ಎಂದು ಚಿಂತಕ ಡಾ.ಜಿ. ರಾಮಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಂಘರ್ಷ ಸಮಿತಿ 'ಶಾಲಾ ಶಿಕ್ಷಣದಲ್ಲಿ ಪಠ್ಯಗಳು' ಎಂಬ ಬಗ್ಗೆ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಅವರನ್ನು ಬೌದ್ಧಿಕವಾಗಿ ವಿಕಾಸಗೊಳಿಸುವಂತಹ ವಿಷಯ ಇಂದಿನ ಪಠ್ಯಗಳಲ್ಲಿ ಇಲ್ಲ. ಜತೆಗೆ ಇತ್ತೀಚಿನ ಪಠ್ಯಪುಸ್ತಕಗಳಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿದ್ದು ಇಂಗ್ಲಿಷ್ ಲಾಬಿ ಹೆಚ್ಚಾಗುತ್ತಿದೆ. ಪರಿಣಾಮ ಮಾತೃಭಾಷೆ ಶಿಕ್ಷಣ ಕಡೆಗಣಿಸಲ್ಪಡುತ್ತಿದೆ ಎಂದರು.