ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಣ್ಣಿನ ಸಂರಕ್ಷಣೆಗೆ ಕಾಳಜಿ ಅಗತ್ಯ: ಡಾ. ಅರುಣ್

Rashmi Kasaragodu
Updated On : 16 Jul 2013, 1:29 am

ಕನ್ನಡಪ್ರಭ ವಾರ್ತೆ, ಕನಕಪುರ,ಜುಲೈ 15
ಮಾನವನ ಅಂಗಗಳಲ್ಲಿಯೇ ಕಣ್ಣು ಅತ್ಯಂತ ಪ್ರಮುಖವಾಗಿದ್ದು ಅದರ ಸಂರಕ್ಷಣೆಗೆ ಎಷ್ಟು ಮಂಜಾಗರೂಕತೆ ವಹಿಸಿದರೂ ಸಾಲದು. ವರ್ಷಕ್ಕೊಮ್ಮೆ ನೇತ್ರ ತಪಾಸಣೆಯಿಂದ ಮುಂದಾಗಬಹುದಾದ ಅನೇಕ ಆತಂಕಗಳನ್ನು ನೀಗಿಕೊಳ್ಳಬಹುದು ಎಂದು ವಾಸನ್‌ಐ ಕೇರ್‌ಸಂಸ್ಥೆಯ ಛೇರ್ಮನ್ ಡಾ.ಅರುಣ್ ಹೇಳಿದ್ದಾರೆ.
ಅವರು ಕನಕಪುರದ ರೋಟರಿ ಭವನದಲ್ಲಿ ನೇತ್ರ ಜಾಗೃತಿ ಅಭಿಯಾನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಉದ್ಘಾಟನೆಯನ್ನು ರೋಟರಿ ಅಧ್ಯಕ್ಷ ಸಿ. ವಿಜಯ್ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ದೃಶ್ಯಶ್ರವಣ ಮಾಧ್ಯಮದ ಮೂಲಕ ಕಣ್ಣಿಗೆ ಸಂಬಂಧಿಸಿದ ತೊಂದರೆಗಳು, ಕಾಯಿಲೆಗಳು ಹಾಗೂ ಚಿಕಿತ್ಸೆಗಳ ಬಗ್ಗೆ ನೆರೆದ ಜನರಿಗೆ ಅರಿವು ಮೂಡಿಸಲಾಯಿತು.
ನೇತ್ರತಪಾಸಣೆ, ಚಿಕಿತ್ಸೆಗೆ ಸಂಬಂಧಿಸಿದಂತೆ ಇಂದು ಅತ್ಯಾಧುನಿಕ ಸಲಕರಣೆಗಳು ಚಿಕಿತ್ಸೆಗಳು ಲಭ್ಯವಿದ್ದು ಜನರು ನವೀನ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು, ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆಗೆ ಅತ್ಯಾಧುನಿಕ ಲ್ಯಾಸಿಕ್‌ಲೇಸರ್ ತಂತ್ರ ಜ್ಞಾನವೂ ಇಂದು ಲಭ್ಯವಿದೆ, ಕೆಲವೇ ನಿಮಿಷಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಯೂವುದೇ ನೋವಿಲ್ಲದಂತೆ, ರಕ್ತಬಾರದಂತೆ ಮಾಡಬಹುದಾದ ತಂತ್ರಜ್ಞಾನವೂ ಲಭ್ಯವಿದೆ ಎಂದು ಡಾ.ರಾಜಶೇಖರ್ ನುಡಿದರು.
ನೇತ್ರತಜ್ಞರುಗಳಾದ ಡಾ.ನಾಗೇಶ್, ವಾಸನ್‌ಐಕೇರ್ ಪ್ರಧಾನ ವ್ಯವಸ್ಥಾಪಕ ಸುಂದರ್ ಮುರುಗೇಶನ್, ಡಾ.ಶೀಲಾಬಿಲಾಲ್, ಡಾ.ಸೋಮಶೇಖರ್, ಡಾ.ಸುಬ್ರಮಣಿ, ಗಂಗಾಧರ್, ಅಶ್ವಿನ್, ಪವನ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement