ಬೇಟೆ: ನಾಲ್ಕು ಮಂದಿ ಬಂಧನ
ಕ.ಪ್ರ.ವಾರ್ತೆ ರಾಮನಗರ ಜು.15
ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಭೇಟೆಯಾಡುತ್ತಿದ್ದ ನಾಲ್ಕು ಮಂದಿಯನ್ನು ದಸ್ತಗಿರಿ ಮಾಡಿರುವ ಗ್ರಾಮಾಂತರ ಪೊಲೀಸರು ಅವರ ಬಳಿ ಇದ್ದ ಪರವಾನಗಿ ಇಲ್ಲದ 4 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಯರೇಹಳ್ಳಿ ಬಳಿಯ ಪೂಜಾರಿದೊಡ್ಡಿ ಕಾಲೋನಿಯ ಜಗದೀಶ, ಬಿಳಿಯಯ್ಯ, ಈರಯ್ಯ ಹಾಗೂ ಯರೇಹಳ್ಳಿಯ ಮಂಜೇಶ ಬಂಧಿತರು. ಶನಿವಾರ ರಾತ್ರಿ 10.45ರ ಸಮಯದಲ್ಲಿ ತಾಲೂಕಿನ ಅಂಕನಹಳ್ಳಿ-ಜಾಲಮಂಗಲ ರಸ್ತೆಯಲ್ಲಿರುವ ನಂಜಯ್ಯ ಎಂಬುವರ ಜಮೀನಿನ ಸಮೀಪ ಭೇಟೆಗೆ ಹೊರಟಿದ್ದವರನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಇವರಿಗೆ ಬಂದೂಕು ತಯಾರಿಸಿಕೊಡುತ್ತಿದ್ದ ಮಾಗಡಿಯ ಮಾಯನಾಯ್ಕನಹಳ್ಳಿಯ ಆನಂದಾಚಾರಿ ತಲೆಮರೆಸಿಕೊಂಡಿದ್ದು, ಆತನ ಮನೆಯಲ್ಲಿ ಬಂದೂಕು ತಯಾರಿಕಾ ಸಾಮಗ್ರಿ, ಮದ್ದು-ಗುಂಡುಗಳು, ಗನ್ ಪೌಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 5 ಮಂದಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.