ಸದಾಶಿವ ಆಯೋಗದಂತೆ ಮೀಸಲಾತಿ ವರ್ಗೀಕರಣ ಆಗಲಿ
ವಿಜಯಪುರ: ಮಾದಿಗ ಸಮಾಜ ಇಂದಿಗೂ ಸಾಕಷ್ಟು ಹಿಂದೆ ಉಳಿದಿದ್ದು ಅಭಿವೃದ್ಧಿ ಹೊಂದಬೇಕಾದರೆ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ತಾಲೂಕು ಮಾದಿಗ ದಂಡೋರದ ಅಧ್ಯಕ್ಷ ಮಾರಪ್ಪ ಅಭಿಪ್ರಾಯಪಟ್ಟರು. ಅವರು ಇಲ್ಲಿನ ದುರ್ಗಾ ತಾಯಿ ಕಾಲೋನಿಯ ಅಂಬೇಡ್ಕರ್ ಭವನದಲ್ಲಿ ಮಾದಿಗ ದಂಡೋರದ ಟೌನ್ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುರಸಭೆಯ ಸದಸ್ಯ ನಾಗರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿಯಂತೆ ಮೀಸಲಾತಿ ವರ್ಗಿಕರಣ ಜಾರಿಯಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.ಪುರಸಭಾ ಸದಸ್ಯರಾದ ಅರುಣತಿರುಮಲೇಶ್ ಹಾಗೂ ಎಂ.ನಾಗರಾಜ್ ಅವರನ್ನು ತಾಲೂಕು ದಂಡೋರ ಸಮಿತಿಯಿಂದ ಸನ್ಮಾನಿಸಲಾಯಿತು. ತಾಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಹೋಬಳಿ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಸದಸ್ಯ ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ತಿರುಮಲೇಶ್, ಗಂಗರೆಡ್ಡಿ ಉಪಸ್ಥಿತರಿದ್ದರು. ವಿಜಯಪುರ ಟೌನ್ ಸಮಿತಿಯ ಅಧ್ಯಕ್ಷರಾಗಿ ಎನ್.ವೆಂಕಟೇಶ್ ಪ್ರಭು, ಉಪಾಧ್ಯಕ್ಷರಾಗಿ ತಿರುಮಲೇಶ್, ವೆಂಕಟೇಶ್, ರಾಜು. ಕೆ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ರಾಘವ, ಸಹಕಾರ್ಯದರ್ಶಿಯಾಗಿ ನಾಗರಾಜು, ಮಂಜುನಾಥ್, ಮುನಿಗಂಗ, ಸಂಘಟನಾ ಕಾರ್ಯದರ್ಶಿಯಾಗಿ ವೀರಪ್ಪ, ಸಿ.ವೆಂಕಟೇಶ್, ಖಜಾಂಜಿಯಾಗಿ ಮುನೇಶ್, ಕಾನೂನು ಸಲಹೆಗಾರರಾಗಿ ಎ. ನಾರಾಯಣಸ್ವಾಮಿ (ವಕೀಲರು) ಆಯ್ಕೆಯಾದರು