ಗಂಡು ಮಗು ಪತ್ತೆ
ರಾಮನಗರ: ಕನಕಪುರ ಟೌನ್ನ ಕುರುಪೇಟೆ ವ್ಯಾಪ್ತಿಯ ಸಿಂಡಿಕೇಟ್ ಬ್ಯಾಂಕ್ ಬಳಿ ಸುಮಾರು 2 ವರ್ಷದ ಗಂಡು ಮಗು ಪತ್ತೆಯಾಗಿದೆ. ಮಗುವಿನ ಹೆಸರು, ವಿಳಾಸ, ತಂದೆ ತಾಯಿ ಬಗ್ಗೆ ಮಾಹಿತಿ ಇಲ್ಲ. ಮಗುವನ್ನು ರಾಮನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿಗಳ ಪಾಲನೆಗೆ ನೀಡಲಾಗಿದೆ. ಪಾಲಕರು ಪತ್ತೆಯಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಕನಕಪುರಪುರ ಠಾಣೆ ಆರಕ್ಷಕ ಉಪನಿರೀಕ್ಷಕರ ಸಂಪರ್ಕಿಸಲು ಕೋರಿದೆ.
ಕೋರ್ಸುಗಳಿಗೆ ಪ್ರವೇಶ
ರಾಮನಗರ: ಕರಾಮುವಿಯಿಂದ 2013-14ನೇ ಸಾಲಿನ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಆ.1ರಿಂದ ಪ್ರಾರಂಭವಾಗುತ್ತಿವೆ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರು, ಗೃಹಿಣಿಯರು ಇದರ ಸದುಪಯೋಗ ಪಡೆದುಕೊಳ್ಳಲು ವಿವಿಯ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಕೋರಿದ್ದಾರೆ. ಬಿಎ, ಬಿಕಾಂ, ಕೋರ್ಸುಗಳಿಗೆ ಪಿಯುಸಿ ಅಥವಾ ಎಸ್ಎಸ್ಎಲ್ಸಿ (18ವರ್ಷ), ಎಂಎ, ಎಂಕಾಂ ಕೋರ್ಸುಗಳಿಗೆ ಪದವಿ ಹೊಂದಿರಬೇಕು. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಶೇ.25 ರಷ್ಟು ರಿಯಾಯಿತಿ, ಪ.ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ವಿವಿ, ಸಮಾಜ ಕಲ್ಯಾಣ ಇಲಾಖೆಯಿಂದ ಶೇ. 100ರಷ್ಟು ಹಣ ಮರುಪಾವತಿ ಇರುವುದಾಗಿ ತಿಳಿಸಿದೆ.