ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚುನಾವಣಾ ದಿನಾಂಕ ನಿಗದಿಪಡಿಸಿ ಆದೇಶ

Rashmi Kasaragodu
Updated On : 18 Jul 2013, 1:09 am

ರಾಮನಗರ: ಕರ್ನಾಟಕ ಸಹಕಾರ ಚುನಾವಣಾ ಆಯೋಗವು ಪ್ರಾಥಮಿಕ ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆಸಲು ಚುನಾವಣಾ ದಿನಾಂಕವನ್ನು ನಿಗದಿಪಡಿಸಿ ಆದೇಶಿಸಿದೆ. ಚುನಾವಣೆ ನಡೆಯಲಿರುವ ವೇಳಾಪಟ್ಟಿಯು ಕೆಳಕಂಡಂತಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಆ.25, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳಿಗೆ ಸೆ.1, ಇತರೆ ಸಹಕಾರ ಸಂಘಗಗಳಿಗೆ (ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ಅರ್ಬನ್ ಬ್ಯಾಂಕ್ಗಳು ಮತ್ತು ಇತರೆ ಪತ್ತಿನ ಸಂಘಗಳು) ಸೆ.8, ಇತರೆ ಸಹಕಾರ ಸಂಘಗಳಿಗೆ (ಗ್ರಾಹಕರ ಸಂಘಗಳು, ಇನ್ನಿತರ ಎಲ್ಲಾ ಪತ್ತೇತರ ಸಹಕಾರ ಸಂಘಗಳು) ಸೆ.15ರಂದು ಚುನಾವಣೆ ನಡೆಯಲಿದೆ. ನಿಗದಿಪಡಿಸಿದ ದಿನಾಂಕದಂದು ಜಿಲ್ಲಾ ವ್ಯಾಪ್ತಿಯ ಸಂಬಂಧಿಸಿದ ಸಂಘಗಳು ಆಡಳಿತ ಮಂಡಳಿಗೆ ಚುನಾವಣೆ ನಡೆಸತಕ್ಕದ್ದೆಂದು ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕ ಕೆ.ಎಲ್.ನರಸಿಂಹಮೂರ್ತಿ ತಿಳಿಸಿದ್ದಾರೆ.
ಲಾಡ್ಜ್ನಲ್ಲಿ ಆತ್ಮಹತ್ಯೆ
ಮೈಸೂರು: ಲಾಡ್ಜ್ವೊಂದರಲ್ಲಿ ವ್ಯಕ್ತಿಯೊಬ್ಬ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇರ್ವಿನ್ ರಸ್ತೆಯಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ನಿವಾಸಿ ಪ್ರಸಾದ್ (35) ಆತ್ಮಹತ್ಯೆ ಮಾಡಿಕೊಂಡವರು. ಇವರು ಇರ್ವಿನ್ ರಸ್ತೆಯಲ್ಲಿರುವ ಕಾನಿಷ್ಕಾ ಲಾಡ್ಜ್ನಲ್ಲಿ ಕಳೆದು ಎರಡು ದಿನಗಳಿಂದ ತಂಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement